Friday, January 24, 2025
ರಾಜಕೀಯ

ಕೇಂದ್ರ ಸರ್ಕಾರ ಕರ್ನಾಟಕದ ನೆರೆಗೆ ಸ್ಪಂದಿಸದೇ ಇರುವುದು ಆಶ್ಚರ್ಯವಾಗಿದೆ – ಪೇಜಾವರ ಶ್ರೀ ; ಚಕ್ರವರ್ತಿ ಸೂಲಿಬೆಲೆ ಮಾತಿಗೆ ಪರೋಕ್ಷ ಬೆಂಬಲ – ಕಹಳೆ ನ್ಯೂಸ್

ಅಂಕೋಲಾ, ಅ 3 : ರಾಜ್ಯದ ಜನತೆ ಪ್ರವಾಹದಿಂದ ತ್ತತ್ತರಿಸಿದ್ದಾರೆ, ಇದುವರೆಗೂ ಪರಿಹಾರ ಧನ ಬಿಡುಗಡೆಗೊಳಿಸಿಲ್ಲ, ಜೊತೆಗೆ ಕೇಂದ್ರದಿಂದ ಸರಿಯಾದ ಸ್ಪಂದನೆಯೂ ದೊರೆತಿಲ್ಲ. ಬಿಹಾರಕ್ಕೆ ತತ್ ಕ್ಷಣ ಸ್ಪಂದಿಸಿದ ಕೇಂದ್ರ ಸರ್ಕಾರ ಕರ್ನಾಟಕದ ನೆರೆಗೆ ಸ್ಪಂದಿಸದೇ ಇರುವುದು ಆಶ್ಚರ್ಯವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ನಿಲುವು ನನಗೆ ಆಶ್ವರ್ಯವಾಗಿದೆ, ನಮ್ಮ ಸಂಸದರು, ಸಚಿವರು ಒತ್ತಡ ತರಬೆಕಿತ್ತು. ಇಲ್ಲಿ ನಮ್ಮ ಜನ ನೆರೆಯಿಂದ ಕಂಗಾಲಾಗಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಹಾಗಾಗಿ ನೆರೆ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮತ್ತು ಪರಿಹಾರವನ್ನು ಒದಗಿಸುವಂತೆ ಪ್ರಧಾನಿ ಮೋದಿ ಅವರಿಗೆ ಗುರುವಾರ ಪತ್ರದ ಮೂಲಕ ವಿನಂತಿಸುತ್ತೇನೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು