ಮಹಾತ್ಮ ಗಾಂಧಿ ಜನ್ಮದಿನದ ಅಂಗವಾಗಿ ಕೆದಿಲ ಗ್ರಾಮ ಪಂಚಾಯತ್‍ನಲ್ಲಿ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಕಸದ ಬುಟ್ಟಿ ವಿತರಣೆ ಹಾಗೂ ಘನತಾಜ್ಯ ವಿಲೇವಾರಿ ಯನ್ನು ಸಾಂಕೇತಿಕವಾಗಿ ಆರಂಭಿಸಲಾಯಿತು.
ಉದ್ಘಾಟಿಸಿ ಮಾತನಾಡಿದ ಕೆದಿಲ ಪಂಚಾಯತ್ ಅಧ್ಯಕ್ಷರಾದ ಅಣ್ಣಪ್ಪ ಕುಲಾಲ್ ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತದ ಕಲ್ಪನೆಯನ್ನು ಗ್ರಾಮ ಮಟ್ಟದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ಹೀಗಾಗಲೇ ಘನತಾಜ್ಯ ಘಟಕ ನಿರ್ಮಾಣ ಗೊಂಡಿದೆ.
ತಾಜ್ಯ ಸಂಗ್ರಹಣೆಗೆ ಪ್ರತಿ ಮನೆ ಮನೆಗೆ ಗ್ರಾಮ ಪಂಚಾಯತ್ ವತಿಯಿಂದ ವಾಹನ ಸಂಚಾರವನ್ನು ನಡೆಸಲಿದ್ದು, ತಾಜ್ಯಗಳನ್ನು ಎಲ್ಲೆಡೆ ಬಿಸಾಡದೇ ಕಸದ ಬುಟ್ಟಿ ಯಲ್ಲಿ ಸಂಗ್ರಹಿಸಿ, ಸಂಪೂರ್ಣ ಪ್ಲಾಸ್ಟಿಕ್ ಮುಕ್ತ , ಕಸ ಮುಕ್ತ ಗ್ರಾಮಕ್ಕಾಗಿ ನಮ್ಮೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು. ಪಿ.ಡಿ.ಓ ಅವರು ಮಾತಾಡಿ ಪ್ರತಿ ಮನೆಯಲ್ಲೂ ಹಸಿ ಹಾಗೂ ಒಣ ಕಸವಾಗಿ ವಿಂಗಡಿಸಿ ನೀಡುವಂತೆ ವಿನಂತಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗ್ರಾಮ ದ ವಿವಿಧೆಡೆಗಳಲ್ಲಿ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಶ್ರೀಮತಿ ಬೇಬಿ ಎಂ,ಗ್ರಾಮ ಪಂಚಾಯತ್ ಸದಸ್ಯ ರಾದ ಉಮರಬ್ಬ ಗಡಿಯಾರ, ಸುದರ್ಶನ್, ಕುಶಲಪ್ಪ ಕಜೆ,ಪದ್ಮನಾಭ ಗೌಡ, ಹರಿಣಾಕ್ಷಿ, ರಾಧಾ, ವಿಶಾಲಾಕ್ಷಿ, ಓಕೆ ಶ್ಯಾಮ್ ಭಟ್, ಉಪಸ್ಥಿತರಿದ್ದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಗೌಡ ಪ್ರಸ್ತಾವನೆ ಗೈದರು, ಕಾರ್ಯದರ್ಶಿ ದಿನೇಶ್ ಸ್ವಾಗತಿಸಿ ವಂದಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.