Recent Posts

Monday, January 20, 2025
ಸುದ್ದಿ

 ‘ಎಡಕಲ್ಲು‌ ಗುಡ್ಡ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ – ಕಹಳೆ ನ್ಯೂಸ್

ಬೆಂಗಳೂರು: ಹಿರಿಯ ನಟ ‘ಎಡಕಲ್ಲು‌ ಗುಡ್ಡ’ ಚಿತ್ರದ ಖ್ಯಾತಿಯ ನಟ ಚಂದ್ರಶೇಖರ್ ಅವರು ಹೃದಯಾಘಾತದಿಂದ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ಇವರು ಇಂದು ಮುಂಜಾನೆ ಹೃದಯಾಘಾತದಿಂದ ಕೆನಡಾದಲ್ಲಿ ‌ಇಹಲೋಕ ತ್ಯಜಿಸಿದ್ದಾರೆ. ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ಚಂದ್ರಶೇಖರ್‌, ವಿಷ್ಣುವರ್ಧನ್, ರಾಜ್‌ಕುಮಾರ್‌ ಸೇರಿದಂತೆ ಹಲವು ನಟರೊಂದಿಗೆ ನಟಿಸಿದ್ದರು. ನಮ್ಮ ಮಕ್ಕಳು, ಸಂಸ್ಕಾರ, ಪಾಪಪುಣ್ಯ, ವಂಶವೃಕ್ಷ, ಸೀತೆಯಲ್ಲ ಸಾವಿತ್ರಿ, ಎಡಕಲ್ಲು ಗುಡ್ಡದ ಮೇಲೆ, ಸಂಪತ್ತಿಗೆ ಸವಾಲ್‌ ಕಸ್ತೂರಿ ವಿಜಯ, ಸೊಸೆ ತಂದ ಸೌಭಾಗ್ಯ ಸೇರಿದಂತೆ ಇತ್ತೀಚಿನ ತಾರಕ್, ಶಿವಲಿಂಗ ಅಸ್ತಿತ್ವ ಮುಂತಾದ ಹಲವು ಸಿನಿಮಾಗಳು ಸೇರಿದಂತೆ 40 ಚಿತ್ರಗಳಲ್ಲಿ ನಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘3 ಗಂಟೆ 30 ದಿನ 30 ಸೆಕೆಂಡ್’ ಚಂದ್ರಶೇಖರ್‌ ನಟಿಸಿದ ಕೊನೆಯ ಸಿನಿಮಾವಾಗಿದೆ. 10 ದಿನಗಳ ಹಿಂದಷ್ಟೇ ಸಿನಿಮಾ ಪ್ರಚಾರದಲ್ಲಿ ಇವರು ಪಾಲ್ಗೊಂಡಿದ್ದರು. ನಂತರ ಬೆಂಗಳೂರಿನಿಂದ ಕೆನಡಾಗೆ ತೆರಳಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ನಿ ಶೀಲಾ ಪುತ್ರಿ ತಾನ್ಯಾ ಹಾಗೂ ಅನೇಕ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.

ವರದಿ : ಕಹಳೆ ನ್ಯೂಸ್

Leave a Response