ಪುತ್ತೂರಿನ ಪರ್ಲಡ್ಕ ಮತ್ತು ಪಾಂಗಳಾಯಿ ವಾರ್ಡ್ – 19 ರಲ್ಲಿ ನಗರಸಭಾ ಸದಸ್ಯೆ ವಿದ್ಯಾ ಆರ್. ಗೌರಿ ನೇತೃತ್ವದಲ್ಲಿ ಏಕ ಬಳಕೆ ಪ್ಲಾಸ್ಟಿಕ್ (Single use plastic) ದುಷ್ಪರಿಣಾಮದ ಬಗ್ಗೆ ಜನಜಾಗೃತಿ ಸಪ್ತಾಹಕ್ಕೆ ಚಾಲನೆ – ಕಹಳೆ ನ್ಯೂಸ್
ಪುತ್ತೂರು : ನಗರಸಭಾ ವ್ಯಾಪ್ತಿಯ ‘ ವಾರ್ಡ್-19 ‘ ಕಾರ್ಯಕ್ಷೇತ್ರದ ಬೇರೆ ಬೇರೆ ಭಾಗಗಳಲ್ಲಿ ದಿನಾಂಕ – 03/10/19 ಗುರುವಾರದಿಂದ 10/10/19’ ಗುರುವಾರದವರೆಗೆ ನಿರಂತರವಾಗಿ ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
ಮೊದಲದಿನವಾದ 03/10/19 ಗುರುವಾರ “ಪ್ಲಾಸ್ಟಿಕ್ ಬಳಕೆ” ದುಷ್ಪರಿಣಾಮದ ಜಾಗೃತಿ ಸಪ್ತಾಹದ ಅಭಿಯಾನಕ್ಕೆ ನಗರಸಭೆಯ ಪರಿಸರ ಇಂಜಿನಿಯರ್ ಗುರುಪ್ರಸಾದ್ ಚಾಲನೆ ನೀಡಿದರು.
ವಾರ್ಡ್-19′ ನಗರಸಭಾ ಸದಸ್ಯೆ ಶ್ರೀಮತಿ ವಿದ್ಯಾಗೌರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಬೂತ್ ಅಧ್ಯಕ್ಷರಾದ ಶಿವಕುಮಾರ್ ಭಟ್ ಕಲ್ಲಿಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ವಾರ್ಡ್-19’ರ ಸ್ವಚ್ಛತಾ ಸಮಿತಿಯ ಸಂಚಾಲಕರಾದ ಪುರುಷೋತ್ತಮ ನ್ಯಾಕ್ ಕರಪತ್ರ ಬಿಡುಗಡೆ ಮಾಡಿದರು.
ಪಾಲ್ಗೊಂಡ ಗಣ್ಯರು ಸಂಕಲ್ಪ ಸ್ವೀಕರಿಸಿದರು, ಬಳಿಕ ಕಲ್ಲಿಮಾರ್ ಪರಿಸರದ ಮನೆಗಳು ಹಾಗೂ ಅಂಗಡಿಗಳಿಗೆ ತೆರಳಿ ಕರಪತ್ರ ವಿತರಿಸುವುದರೊಂದಿಗೆ ಪ್ಲಾಸ್ಟಿಕ್ ದುಷ್ಪರಿಣಾಮದ ಅರಿವು ಮೂಡಿಸಲಾಯಿತು.