Recent Posts

Monday, January 27, 2025
ಸುದ್ದಿ

ಖಾಸಗಿ ಚಾನೆಲ್‍ನ ಕ್ಯಾಮಾರಾಮ್ಯಾನ್ ಎಂದು ಹೇಳಿ ಸುದ್ದಿ ಪ್ರಕಟಿಸುವ ಬೆದರಿಕೆಯೊಡ್ಡಿ ಚೆಕ್ ಪಡೆದ ಆರೋಪಿಗೆ ಜಾಮೀನು –ಕಹಳೆ ನ್ಯೂಸ್

ಬಂಟ್ವಾಳ: ಖಾಸಗಿ ಚಾನೆಲ್‍ನ ಕ್ಯಾಮಾರಾಮ್ಯಾನ್ ಎಂದು ಹೇಳಿ ಸುದ್ದಿ ಪ್ರಕಟಿಸುವ ಬೆದರಿಕೆಯೊಡ್ಡಿ ಚೆಕ್ ಪಡೆದ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಜಾಮೀನು ನೀಡಿದೆ.

ಅ.3ರಂದು ಸಿದ್ಧಕಟ್ಟೆ ಏಲ್ಪೆಲ್ ನಿವಾಸಿ ಅಶೋಕ್ ಬಂಟ್ವಾಳದ ಖಾಸಗಿ ಶಾಲೆಗೆ ಭೇಟಿ ನೀಡಿ ಶಾಲೆಯ ವಿಚಾರವನ್ನು ಚಾನೆಲ್‍ನಲ್ಲಿ ಬಿತ್ತರಿಸುವುದಾಗಿ ಹೇಳಿ 50 ಸಾವಿರ ರೂ.ಗಳ ಚೆಕ್ ಪಡೆದಿದ್ದನು. ಬಳಿಕ ಆತನನ್ನು ಚಾನೆಲ್‍ನವರು ಸಂಪರ್ಕಿಸಿ ಪೊಲೀಸ್ ದೂರಿನ ಎಚ್ಚರಿಕೆ ನೀಡಿದಾಗ ಶಾಲೆಯ ಚೆಕ್ ಹಿಂತಿರುಗಿಸಿದ್ದನು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆಯವರು ಈತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು