Sunday, November 24, 2024
ಸುದ್ದಿ

ಶ್ರೀ ವೀರಾಂಜನೇಯ ಸೇವಾ ಸಮಿತಿ ವಾಟ್ಸಪ್ ಗ್ರೂಪ್‍ನಿಂದ ಸಹಾಯಧನ ಹಸ್ತಾಂತರ-ಕಹಳೆ ನ್ಯೂಸ್

ಬೆಳ್ತಂಗಡಿ : ಶ್ರೀ ವೀರಾಂಜನೇಯ ಸೇವಾ ಸಮಿತಿಯು ಈ ತಿಂಗಳ ಮಾಸಿಕ 27ನೇ ಸೇವಾಯೋಜನೆಯಾಗಿ ಬೆಳ್ತಂಗಡಿ ತಾಲೂಕು ಪೆರಿಂಜೆಯಲ್ಲಿ ವಾಸವಿರುವ ಸುಚಿತ್ರ ಇವರಿಗೆ ವಿಧಿಯ ವಕ್ರದೃಷ್ಟಿಗೆ ಬಿದ್ದು ಹೊಟ್ಟೆಯಲ್ಲಿ 6ತಿಂಗಳ ಕುಸೊಂದು ಬೆಳೆಯುವಷ್ಟರಲ್ಲಿ ಮೆದುಳು ಸಂಬಂಧಿತ ಮಾರಕ ಕಾಯಿಲೆಗೆ ತುತ್ತಾಗಿ ಕಳೆದ 2ತಿಂಗಳಿನಿಂದ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಕೋಮಾ ವ್ಯವಸ್ಥೆಯಲ್ಲಿ ಇದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ಕಷ್ಟಗಳನ್ನು ಗುರುತಿಸಿದ ಶ್ರೀ ವೀರಾಂಜನೇಯ ಸೇವಾ ಸಮಿತಿಯು ತಮ್ಮ ತಂಡದಿಂದ ಸಂಗ್ರಹಿಸಿದ 12,000ರೂ ಸಹಾಯಧನದ ಚೆಕ್ಕ್‍ನ್ನು ತಂಡದ ಸಹೋದರರ ಸಮ್ಮುಖದಲ್ಲಿ ದಿನಾಂಕ 29-09-2019 ರಂದು ಪಡ್ಯಾರಬೆಟ್ಟು ದೇವಸ್ಥಾನದ ಬಳಿ ಸುಚಿತ್ರರವರ ಬಡಕುಟುಂಬಕ್ಕೆ ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು