Recent Posts

Monday, January 20, 2025
ಸುದ್ದಿ

ಭಾರೀ ಬೆಂಕಿ ಅನಾಹುತ ತಪ್ಪಿಸಿದ ನೆಲ್ಯಾಡಿ ಯುವಕರು – ಕಹಳೆ ನ್ಯೂಸ್

ನೆಲ್ಯಾಡಿ: ಪುತ್ತೂರು ತಾಲೂಕು ನೆಲ್ಯಾಡಿಯಲ್ಲಿ ಯುವಕರ ಸಮಯ ಪ್ರಜ್ಞೆಯಿಂದ ಭಾರೀ ಬೆಂಕಿ ಅನಾಹುತವೊಂದು ತಪ್ಪಿದೆ

 

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ಬದ್ರಿಯಾ ಜುಮಾ ಮಸ್ಜಿದ್ ನ ಮುಂದೆ ಇರುವ ಬದ್ರಿಯಾ ಕಾಂಪ್ಲೆಕ್ಸ್ ನಲ್ಲಿರುವ ಶುಕ್ರಿಯ ಗುಜರಿ ಅಂಗಡಿಯ ಪಕ್ಕದಲ್ಲಿ ಇಟ್ಟಿದ್ದ ಗುಜುರಿ ವಸ್ತುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಸಂಪೂರ್ಣ ವಸ್ತುಗಳು ಬೆಂಕಿಗಾಹುತಿಯಾಗುತ್ತಿರುವುದನ್ನು ಗಮನಿಸಿದ ಮಸ್ಜಿದ್ ನಲ್ಲಿದ್ದ ಸಾಕೀರ್ ಹಕ್ ,ಸಮೀರ್ ಅಬ್ದುಲ್ಲಾ ,ಎನ್ ಕೆ ಮುನೀರ್, ಸಿದ್ದಿಕ್ ರಾಜ, ಅಸಿಫ್ ರಿಜ್ವಾನ್ ಎಂಬ ಯುವಕರು ತಕ್ಷಣ ಕಾರ್ಯಪ್ರವೃತ್ತರಾಗಿ ಹತ್ತಿರದ ಮನೆಯ ಬಾವಿಯಿಂದ ನೀರು ಹಾಕಿ ಬೆಂಕಿ ನಂದಿಸಿ,ಹತ್ತಿರದ ಅಂಗಡಿಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದರು.ಬೆಂಕಿ ಅವಘಡದಲ್ಲಿ ಹೆಚ್ಚಿನ ನಾಶ ನಷ್ಟವಾಗಿಲ್ಲ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್

Leave a Response