Tuesday, January 21, 2025
ಸುದ್ದಿ

ಪುತ್ತೂರಿನ ದಾರಂದಕುಕ್ಕು ಬಳಿ ಮನೆಗೆ ನುಗ್ಗಿ ಭಾರಿ ಕಳ್ಳತನ ; ಲಕ್ಷಾಂತರ ಮೌಲ್ಯದ ನಗದು, ಅಪಾರ ಪ್ರಮಾಣದ ಬೆಲೆಬಾಳುವ ವಸ್ತುಗಳು ಕಳವು – ಕಹಳೆ ನ್ಯೂಸ್

ಪುತ್ತೂರು : ಅ 6 :ವಿಟ್ಲದ ಅಡ್ಯನಡ್ಕ ಹಾಗೂ ಕುದ್ದು ಪದವು ಬಳಿ ಸರಣಿ ಕಳ್ಳ ತನ ನಡೆದ ನೆನಪು ಮಾಸುವ ಮೊದಲೇ ಪುತ್ತೂರು –ಉಪ್ಪಿನಂಗಡಿ ಹೆದ್ದಾರಿಯಲ್ಲಿ ಕಳ್ಳತನ ಸಂಭವಿಸಿದು ತಡವಾಗಿ ಬೆಳಕಿಗೆ ಬಂದಿದೆ .ವಾರದ ಹಿಂದೆಯಷ್ಟೇ ವಿಟ್ಲದ ಅಡ್ಯನಡ್ಕ ಹಾಗೂ ಕುದ್ದು ಪದವಿನ ಹೆದ್ದಾರಿ ಬಳಿ ಸರಣಿ ಕಳ್ಳತನ ನಡೆದಿತ್ತು .ಅಡ್ಯ ನಡ್ಕದ 5 ಅಂಗಡಿಗೆ ಕಳ್ಳರು ನುಗಿದ್ದಾರೆ ,ಕುದ್ದು ಪದವಿನ ಪೆಟ್ರೋಲ್ ಪಂಪಿಗೆ ನುಗ್ಗಿದ ಕಳ್ಳರು ನಾಲ್ಕು ಲಕ್ಷಕ್ಕೂ ಮಿಕ್ಕಿ ಹಣ ದೋಚಿದ್ದರು .

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಪುತ್ತೂರು ತಾಲೂಕಿನ ಚಿಕ್ಕ ಮುಡ್ನೂರು ಗ್ರಾಮದ ದಾರಂದ ಕುಕ್ಕು ಬಳಿ ಹೆದ್ದಾರಿ ಸಮೀಪದ ಮನೆಗೆ ನುಗಿದ್ದ ಕಳ್ಳರು 2 ಲಕ್ಷ ಹಾಗೂ 20 ಸಾವಿರ ರೂಪಾಯಿಯನ್ನು ದೋಚಿರುವುದಾಗಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಇಲ್ಲಿನ PwD ಗುತ್ತಿಗೆದಾರ ಅಶ್ರಫ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಂಧರ್ಭ ಈ ಕೃತ್ಯ ನಡೆದಿದೆ . ಮಕ್ಕಳಿಗೆ ದಸಾರ ರಜೆಯ ಕಾರಣ ಮನೆಯವರು ಅಶ್ರಫ್ ರವರ ಮನೆಗೆ ಹೋಗಿದ್ದ ಸಂಧರ್ಭ ಈ ಕಳ್ಳತನ ನಡೆದಿದೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಅ 2 ರಂದು ಬೆಳಿಗ್ಗೆ ಸಾಲೆತ್ತೂರು ಸಮೀಪದ ಮಾವನ ಮನೆಗೆ ಹೋಗಿದ್ದ ಕುಟುಂಬ ಅ 5 ರಂದು ಮನೆಗೆ ವಾಪಸಾಗಿದ್ದು ಆ ಕೃತ್ಯ ಬೆಳಕಿಗೆ ಬಂದಿದೆ . ಅಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ ಬಟ್ಟೆ ಬರೆ ಇತ್ಯಾದಿಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು , ಮನೆಯ ಕಪಾಟುಗಳನ್ನೂ ಜಾಲಾಡಿದ ಕುರುಹುಗಳು ಕಂಡು ಬಂದಿದ್ದವು. ಗುತ್ತಿಗೆ ಕೆಲಸದವರಿಗೆ ಸಂಬಳ ಬಟಾವಡೆ ಮಾಡಲು ಮನೆಯ ಕಪಾಟಿನಲ್ಲಿ ಇಟ್ಟಿದ್ದ ಹಣ ಕಳ್ಳತನವಾಗಿದೆ ಎಂದು ಅಶ್ರಫ್ ರವರು ಪುತ್ತೂರು ನಗರ ಠಾಣೆಗೆ ಅ 6 ರ ಮದ್ಯಾಹ್ನ ನೀಡಿದ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.