Recent Posts

Tuesday, January 21, 2025
ಸಿನಿಮಾ

#Boycott_BigBoss ಮುಸ್ಲಿಂ ಯುವಕನ ಜೊತೆ ಹಾಸಿಗೆ ಶೇರ್ ಮಾಡುವಂತೆ ಹಿಂದೂ ಯುವತಿಗೆ ಬಿಗ್ ಬಾಸ್ ‌ಟಾಸ್ಕ್ ; ಬ್ರಾಹ್ಮಣ ಯುವತಿಯೊಂದಿಗೆ ಕಾಶ್ಮೀರಿ ಮುಸ್ಲಿಂ – ಸಲ್ಮಾನ್ ಖಾನ್ ಶೋ ಬಿಗ್ ಬಾಸ್ ವಿರುದ್ಧ ಆಕ್ರೋಶ – ಕಹಳೆ ನ್ಯೂಸ್

ಮುಂಬೈ, ಅಕ್ಟೋಬರ್ 7 : ಬಿಗ್ ಬಾಸ್ ಎನ್ನುವುದೇ ಒಂದು ವಿಚಿತ್ರ ರಿಯಾಲಿಟಿ ಶೋ. ಸಾಂಪ್ರದಾಯಿಕರಾರು ಇಂತಹಾ ಶೋ ಗಳನ್ನು ನೋಡದಿರುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೀಗ ಹಿಂದಿ ಕಲರ್ಸ್ ನಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿರುವ ಟಾಸ್ಕ್ ಭಾರೀ ವಿವಾದ ಸೃಷ್ಟಿಸಿದೆ. ಯುವತಿಯರು ಹಾಸಿಗೆ ಶೇರ್ ಮಾಡಬೇಕೆಂಬ ಟಾಸ್ಕ್ ವಿವಾದದ ಬಿರುಗಾಳಿ ಎಬ್ಬಿಸಿದೆ. ಭಾರತೀಯ ಸಂಸ್ಕೃತಿ ಹಾಗೂ ಜೀವನ ಪದ್ದತಿಯ ವಿರುದ್ಧದ ದಾಳಿ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

#Boycott_BigBoss ಎಂಬ ಹ್ಯಾಷ್‌ ಟ್ಯಾಗ್ ಅಡಿ ಭಾರೀ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಹಾಗೂ ಕಲರ್ಸ್ ಹಿಂದಿ ವಾಹಿನಿಯ ವಿರುದ್ಧ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ನೆಟ್ಟಿಗರು, ಇದೊಂದು ಲವ್ ಜಿಹಾದ್ ಎಂದು ಹೇಳುವ ಮೂಲಕ ಎದ್ದಿರುವ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

ಬಿಗ್ ಬಾಸ್ ಸ್ಪರ್ಧಿ ಬ್ರಾಹ್ಮಣ ಯುವತಿಯೋರ್ವಳನ್ನು ಮತ್ತೊರ್ವ ಸ್ಪರ್ಧಿ ಕಾಶ್ಮೀರಿ ಮುಸ್ಲಿಂ ಯುವಕನೊಂದಿಗೆ ಹಾಸಿಗೆ ಶೇರ್ ಮಾಡುವಂತೆ ಟಾಸ್ಕ್ ನೀಡಿದ್ದು, ಈ ಟಾಸ್ಕ್ ನಿಂದ ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ ಎನ್ನುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.