Wednesday, January 22, 2025
ರಾಜಕೀಯ

ವಿಜಯದಶಮಿಗೆ ‘ರಫೇಲ್’ ಯುದ್ದ ವಿಮಾನ ಭಾರತಕ್ಕೆ ಹಸ್ತಾಂತರ ; ಆಯುಧ ಪೂಜೆ ನೆರವೇರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ – ಕಹಳೆ ನ್ಯೂಸ್‍

ನವದೆಹಲಿ, ಅ 7 : ದಸರಾ ಹಬ್ಬದ ಶುಭದಿನದಂದು ಶಸ್ತ್ರಾಸ್ತ್ರಗಳಿಗೂ ಪೂಜೆ ಮಾಡುವ ಸಂಪ್ರದಾಯವಿದ್ದು, ಈ ನಿಟ್ಟಿನಲ್ಲಿ ಭಾರತದ ವಾಯುಪಡೆಗೆ ಸೇರ್ಪಡೆಯಾಗುವ ರಫೇಲ್ ಯುದ್ಧ ವಿಮಾನಕ್ಕೆ ವಿಜಯದಶಮಿ ದಿನದಂದು ರಕ್ಷಣಾ ಸಚಿವ ಆಯುಧ ಪೂಜೆ ನೆರವೇರಿಸಲಿದ್ದಾರೆ. ಈ ಯುದ್ದ ವಿಮಾನ ಮಂಗಳವಾರ ಭಾರತಕ್ಕೆ ಹಸ್ತಾಂತರಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫ್ರಾನ್ಸ್ ನಲ್ಲೇ ರಫೇಲ್ ಯುದ್ಧವಿಮಾನವನ್ನು ಸ್ವೀಕರಿಸುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಳಿಕ ಅಲ್ಲಿಯೇ ಆಯುಧಪೂಜೆಯನ್ನೂ ನೆರವೇರಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಮಾನ ಸ್ವೀಕರಿಸಿದ ಬಳಿಕ ರಫೇಲ್ ನಲ್ಲಿಯೇ ರಾಜನಾಥ್ ಅವರು ಹಾರಾಟ ನಡೆಸಲಿದ್ದಾರೆ. ಫ್ರೆಂಚ್ ಪೈಲಟ್ ಒಬ್ಬರು ರಾಜನಾಥ್ ಅವರನ್ನು ಹಿಂದಿನ ಸೀಟಿನಲ್ಲಿ ಕೂರಿಸಿ ರಫೇಲ್ ಯುದ್ದ ವಿಮಾನವನ್ನು ಹಾರಿಸಲಿದ್ದಾರೆ. ಭಾರತಕ್ಕೆ ರಷ್ಯಾ 36 ರಫೇಲ್ ಗಳನ್ನು ಹಸ್ತಾಂತರಿಸಬೇಕಿದ್ದು, ಮುಂದಿನ ದಿನಗಳಲ್ಲಿ ಬಾಕಿ 35 ವಿಮಾನಗಳನ್ನು ರವಾನೆಯಾಗಲಿವೆ.

ಅಕ್ಟೋಬರ್ 8ರಂದು ರಾಜನಾಥ್ ಫ್ರಾನ್ಸ್ ತಲುಪಲಿದ್ದು, ದಸರಾ ಹಬ್ಬದ ಜೊತೆ, ಭಾರತೀಯ ವಾಯುಪಡೆಯ ದಿನವೂ ಆಗಲಿದೆ.