Wednesday, January 22, 2025
ಸುದ್ದಿ

ಉಳ್ಳಾಲ ಪುರಸಭೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬಸ್ಸನ್ನು ಉಡುಪಿಗೆ ಕದ್ದೊಯ್ದ ಯುವಕ ನಿಫಾಝ್ – ಕಹಳೆ ನ್ಯೂಸ್‍

ಉಳ್ಳಾಲ, ಅ 7 : ಯುವಕನೋರ್ವ ನಕಲಿ ಕೀ ಬಳಸಿ ಉಳ್ಳಾಲ ಪುರಸಭೆಯ ಮುಂಭಾಗದಲ್ಲಿ ನಿಲ್ಲಿಸಿದ ಬಸ್ ನ್ನು ಉಡುಪಿಯತ್ತ ಕದ್ದೊಯ್ದ ಘಟನೆ ಶನಿವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಯನ್ನು ನಿಫಾಝ್ ಎಂದು ಗುರುತಿಸಲಾಗಿದೆ. ಉಳ್ಳಾಲದ ಅಬ್ಬಾಲಿ ಆಲಿ ಮಾಲೀಕತ್ವದ ಎ.ಆರ್.ಟ್ರಾವೆಲ್ಸ್ ಬಸ್‌ನ್ನು ಚಾಲಕ ಶನಿವಾರ ರಾತ್ರಿ ನಿಲ್ಲಿಸಿ ಕೋಟೆಪುರದಲ್ಲಿ ನಿಲ್ಲಿಸಿ ಮನೆಗೆ ತೆರಳಿದ್ದರು. ಬೆಳಗ್ಗೆ ಕ್ಲೀನರ್ ಬಂದು ನೋಡಿದಾಗ ಬಸ್ ಇರಲಿಲ್ಲ. ಮಾಲೀಕರಿಗೆ ಕರೆ ಮಾಡಿ ವಿಚಾರಿಸಿದಾಗ ಬಸ್ ಕಳವಾಗಿದ್ದು ಬೆಳಕಿಗೆ ಬಂದಿದ್ದು, ತಕ್ಷಣ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಕೆಲವೇ ಹೊತ್ತಿನಲ್ಲಿ ಬಸ್ ಮಾಲೀಕರ ಮಿತ್ರರೊಬ್ಬರು ಉಡುಪಿಯಿಂದ ಕರೆ ಮಾಡಿ, ಬಸ್ ಈಗಷ್ಟೇ ಹೆದ್ದಾರಿಯಲ್ಲಿ ಸಂಚರಿಸಿದ್ದು ಎಲ್ಲಿಗಾದರೂ ಪ್ರವಾಸಕ್ಕೆ ಹೋಗ್ತಿದೆಯಾ ಎಂದು ವಿಚಾರಿಸಿದ್ದಾರೆ. ತಕ್ಷಣ ಬಸ್ ತಡೆಯುವಂತೆ ಮಾಲೀಕ ಮಿತ್ರನಿಗೆ ತಿಳಿಸಿದ್ದು, ಅವರು ಉಡುಪಿ ಪೊಲೀಸರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಉಡುಪಿ ನಗರ ಠಾಣೆ ಪೊಲೀಸರು ಆರೋಪಿ ಸಹಿತ ಬಸ್ ವಶಕ್ಕೆ ಪಡೆದಿದ್ದಾರೆ. ಈ ನಡುವೆ ಬಸ್ ಮಾಲಕರಿಗೆ ಉಡುಪಿ ಪೊಲೀಸರು ಮಾಹಿತಿ ನೀಡಿದ್ದು, ಅವರು ಆಗಮಿಸಿ ಬಸ್ಸನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವಕ ಗಾಂಜಾ ವ್ಯಸನಿಯಾಗಿದ್ದ ಎನ್ನಲಾಗಿದ್ದು, ಉಳ್ಳಾಲದಿಂದ ಬಸ್ಸನ್ನು ಕೊಂಡೊಯ್ಯುವ ಸಂದರ್ಭ ಸಿಕ್ಕಿದ ಎರಡು ಟೋಲ್‌ಗೇಟ್‌ಗಳನ್ನೂ ಹೊಡೆದುಕೊಂಡು ಹೋದ ಪರಿಣಾಮ ಬಸ್ ಗಾಜುಗಳು ಒಡೆದಿವೆ. ಉಡುಪಿ ತಲುಪಿದಾಗ ಆರೋಪಿ ತಂದೆಗೆ ಕರೆ ಮಾಡಿ, ತಾನು ಬಸ್ ಖರೀದಿಸಿದ್ದು ಉಡುಪಿಯಲ್ಲಿದೆ ಎಂದು ತಿಳಿಸಿದ್ದಾನೆ. ಬಸ್ಸಿನ ಗಾಜುಗಳು ಪುಡಿಯಾಗಿದ್ದಲ್ಲದೆ ಗೇರ್‌ಬಾಕ್ಸ್ ಹಾನಿಯಾಗಿದೆ.