Saturday, November 23, 2024
ಸುದ್ದಿ

ದೇವಿಪ್ರಸಾದ್ ಬೊಳ್ಮ ಧರ್ಮಸ್ಥಳ ಇವರಿಗೆ ಗೌರವ ಡಾಕ್ಟರೇಟ್ – ಕಹಳೆ ನ್ಯೂಸ್

ಬೆಂಗಳೂರು :– ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸ್ಥಳೀಯಾಡಳಿತ ಗ್ರಾಮ ಪಂಚಾಯತ್ ಧರ್ಮಸ್ಥಳ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿರುವ ದೇವಿಪ್ರಸಾದ್ ಬೊಳ್ಮ ಧರ್ಮಸ್ಥಳ ಇವರು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ಖಆPಖ ರಾಜ್ಯ ಸಮಿತಿ ಇದರ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಇವರ ಸಂಘಟನೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ರಾಜ್ಯದ 5 ಸಂಘ ಸಂಸ್ಥೆಗಳ ಶಿಫಾರಸಿನಂತೆ ಇಂಟರ್ ನ್ಯಾಶನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ ಇವರು ದಕ್ಷಿಣ ಭಾರತದ ಹೊಸೂರಿನಲ್ಲಿ ದಿನಾಂಕ 29/09/2019 ರಂದು ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮ ಪಂಚಾಯಿತಿ ನೌಕರರ ರಾಜ್ಯಾಧ್ಯಕ್ಷರಾಗಿ, ನೌಕರರ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸರಕಾರದ ವಿರುದ್ಧ ಯಾವುದೇ ಪ್ರತಿಭಟನೆ ಹೋರಾಟ ಮುಷ್ಕರ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆದುಕೊಂಡು, ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಗೌರವಯುತವಾಗಿ ಸರಕಾರದೊಂದಿಗೆ ಮನವಿ ಹಾಗೂ ಮಾತುಕತೆಗಳ ಮೂಲಕ, ಸರಕಾರದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಗೌರವದಿಂದ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ, ರಾಜ್ಯದ ಗ್ರಾಮ ಪಂಚಾಯಿತಿ ನೌಕರರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜಾಗೃತಿ ಮೂಡಿಸಿ, ನೌಕರರ ಗೌರವ ಕಾಪಾಡಿಕೊಂಡು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯವಸ್ಥೆಯಡಿ ಶಾಂತಿಯುತ ವಾತಾವರಣ ನಿರ್ಮಿಸಿದ ಬಗ್ಗೆ ಹಾಗೂ ಈ ಸಂಘಟನೆಯಿಂದ ಗ್ರಾಮ ಪಂಚಾಯಿತಿ ನೌಕರರಿಗೆ ಕೆಲವು ವ್ಯವಸ್ಥೆಗಳು ಕಾರ್ಯರೂಪಕ್ಕೆ ಬರುವಲ್ಲಿ, ಈ ಸಂಘಟನೆಯ ಕಾರ್ಯವೈಖರಿಯನ್ನು ಗಮನಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ನೌಕರರಿಗೆ ಗೌರವ ಡಾಕ್ಟರೇಟ್ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇವರ ಸಂಘಟನಾ ಚಟುವಟಿಕೆಯನ್ನು ಗುರುತಿಸಿ ರಾಜ್ಯ ಯುವ ಒಕ್ಕಲಿಗರ ಸಂಘ (ರಿ) ಕರ್ನಾಟಕ , ಇವರು ರಾಜ್ಯ ಕಾರ್ಯದರ್ಶಿಯನ್ನಾಗಿ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ (ರಿ) ಬೆಂಗಳೂರು ಇವರು ಪತ್ರಿಕಾ ಕಾರ್ಯದರ್ಶಿಯನ್ನಾಗಿ ಮಾಡಿ ಜವಾಬ್ದಾರಿಯನ್ನು ನೀಡಿರುತ್ತಾರೆ,

ಇವರು ಭಾರತ ಚುನಾವಣಾ ಆಯೋಗದ ಬೂತ್ ಮಟ್ಟದ ಅಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು 2015 ನೇ ಲೋಕಸಭೆ ಹಾಗೂ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಉತ್ತಮ ಬೂತ ಮಟ್ಟದ ಅಧಿಕಾರಿ ಎಂಬ ಪ್ರಶಂಸನಾ ಪ್ರಶಸ್ತಿಯನ್ನು ಆಗಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಇಬ್ರಾಹಿಂ ಯವರು ಚುನಾವಣಾ ಆಯೋಗದಿಂದ ನೀಡಿರುತ್ತಾರೆ

 

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ನೆರೆ ಸಂತ್ರಸ್ತರ ಮನೆಗಳಿಗೆ ಅಡುಗೆ ಪಾತ್ರೆಗಳು ಹಾಗೂ ದಿನ
ಸಿ ಸಾಮಗ್ರಿಗಳನ್ನು ಒದಗಿಸುವಲ್ಲಿ ಹಾಗೂ ನೆರೆ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಉದ್ಯೋಗ ಭರವಸೆಯನ್ನು ಅಶ್ವಿನ್ ಪ್ರಾಡೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖಾಂತರ ಮಾಡಿದ್ದರು ಹಾಗೂ ಸದ್ರಿ ಕಂಪನಿಗಳ ಮುಖಾಂತರ ಉತ್ತರ ಕರ್ನಾಟಕ ಹಾಗೂ ಕೇರಳ ಪ್ರವಾಹದಿಂದ ತೊಂದರೆಯಾದ ಕುಟುಂಬಗಳಿಗೆ ಸಹಾಯ ಮಾಡುವಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು .

 

ಸದರಿಯವರು ಧರ್ಮಸ್ಥಳ ಗ್ರಾಮದ ಕನ್ಯಾಡಿ ಬೊಳ್ಮ ನಿವಾಸಿಯಾಗಿದ್ದು ಶ್ರೀಕ್ಷೇತ್ರ ಧರ್ಮಸ್ಥಳ, ಶ್ರೀರಾಮಕ್ಷೇತ್ರ ಕನ್ಯಾಡಿ , ಸಾರ್ವಜನಿಕ ಗ್ರಾಮ ದೈವಸ್ಥಾನ ದೊಂಪದ ಬಲಿ ಉತ್ಸವ ಸಮಿತಿ ಕನ್ಯಾಡಿ , ಸೇವಾ ಭಾರತಿ (ರಿ) ಕನ್ಯಾಡಿ , ಶ್ರೀ ಶಾರದೋತ್ಸವ ಸಮಿತಿ, ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಶ್ರೀರಾಮ ಭಜನಾ ಮಂಡಳಿ ದೊಂಡೋಲೆ,ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ , ಊರಿನ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಂಘಟನಾ ಶಕ್ತಿಯನ್ನು ಬೆಳೆಸಿಕೊಂಡಿರುತ್ತಾರೆ.ಸದ್ರಿ ನೀಡಿದ ಗೌರವದಿಂದ ರಾಜ್ಯದ ಗ್ರಾಮ ಪಂಚಾಯಿತಿ ನೌಕರರು ಇಲಾಖಾ ಅಧಿಕಾರಿಗಳು ಸಾರ್ವಜನಿಕರಲ್ಲಿ ಸಂತಸ ತಂದಿದೆ,

 

ಈ ಸಂದರ್ಭದಲ್ಲಿ ಡಾಕ್ಟರ್ ಕೆ ಅಶೋಕ್ ಕುಮಾರ್ ಫೌಂಡರ್ ಐಜಿಪಿಯು, ಡಾಕ್ಟರ್ ಬಿ ಮೊಗಲ್ ರಾಜ್ ನ್ಯೂಸ್ ರೀಡರ್, ಮಕ್ಕಳ ಟಿವಿಯ ಡಾಕ್ಟರ್ ಸಿಆರ್ ಸಿಆರ್ ಭಾಸ್ಕರನ್, ಮಿಸ್ಟರ್ ಕೆಎ ಮನೋಹರ್ , ಮಿಸೆಸ್ ಇಂಡಿಯಾ ಪ್ರೀತಿ ರಾಜ್, ಪ್ರೊಫೆಸರ್ ಡಾಕ್ಟರ್ ಪಲ್ಲವಿ ಸಿಂಧಿ ಪಿಯು ಕಾಲೇಜು ಬೆಂಗಳೂರು, ಡಾಕ್ಟರ್ ಸಿಪ್ ಸಿಪ್ ಪಾಲ್ ಎಬಿನೇಜರ್ ನಿರ್ದೇಶಕರು ಐಜಿಪಿಯು, ಡಾಕ್ಟರ್ ಆರ್ ಹರಿಕೃಷ್ಣ ಅಧ್ಯಕ್ಷರು ಗೋಪಿ ಅಸೋಸಿಯೇಟ್ಸ್, ಡಾಕ್ಟರ್ ಚಂದನ್ ನೋಂದಣಾಧಿಕಾರಿ ಐಜಿಪಿಯು, ಡಾಕ್ಟರ್ ಲಕ್ಷ್ಮಿ ಶ್ರೀನಿವಾಸ್ ಖ್ಯಾತ ಜ್ಯೋತಿಷಿ, ಡಾಕ್ಟರ್ ಶ್ರೀ ರಂಗನಾಥ ಸ್ವಾಮಿ ಎಚ್ ಆರ್ ಖ್ಯಾತ ರೇಖ ಜ್ಯೋತಿಷಿ, ಆರ್ ಬಾಲಾಜಿ ಚೇರ್ಮನ್ ಅಧ್ಯಕ್ಷರು ಸಿಬಿಡಿ ಅಸೋಸಿಯೇಷನ್, ಡಾಕ್ಟರ್ ಗುಣವಂತ ಮಂಜು ಚಲನಚಿತ್ರ ನಟರು ಹಾಗೂ ನಿರ್ದೇಶಕರು, ಮಿಸೆಸ್ ಸಾಧನ ಚಲನಚಿತ್ರ ನಟಿ,ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು