
ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಪೆರುವಾಜೆ ಇಲ್ಲಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅರಂತೋಡು ಇವುಗಳ ಸಹಯೋಗದಲ್ಲಿ ಅಂಗನವಾಡಿ ಕೇಂದ್ರ ಕಳುಬೈಲು ಇಲ್ಲಿ “ಪೌಷ್ಟಿಕ ಆಹಾರ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.
ಪ್ರಾಸ್ತಾವಿಕ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಧನಲಕ್ಷ್ಮೀ ನಾವು ನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಪೌಷ್ಟಿಕ ಪ್ರಮಾಣವನ್ನು ಹೆಚ್ಚಿಸಿ ನಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಅರಂತೋಡು ಇಲ್ಲಿನ ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಭಾಗೀರಥಿ ಮಾತನಾಡಿ ರಕ್ತ ಹೀನತೆ ಅ ಪೌಷ್ಟಿಕತೆ ಮುಖ್ಯ ಕಾರಣವಾಗಿದೆ, ಪೌಷ್ಟಿಕ ಆಹಾರ ಸೇವಿಸುವುದರ ಜೊತೆಗೆ ಚುಚ್ಚು ಮದ್ದು ಜಂತುಹುಳ ನಿವಾರಣ ಮಾತ್ರೆಗಳನ್ನು ಕಾಲ ಕಾಲಕ್ಕೆ ಸರಿಯಾಗಿ ತೆಗದುಕೊಳ್ಳುವುದು ಅತೀ ಅಗತ್ಯ, ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಪೌಷ್ಟಿಕ ಸಮತೋಲನ ಕಾಪಾಡಬೇಕು ಎಂದರು. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಕೊಡೆಂಕೇರಿ ಅಧ್ಯಕ್ಷತೆಯನ್ನು ವಹಿಸಿದ್ದರು, ವೇದಿಕೆಯಲ್ಲಿ ಶ್ರೀ ಮಲ್ಲಿಕಾರ್ಜುನ ಸ್ತ್ರೀ ಶಕ್ತಿ ಸಂಘಗಳ ಅಧ್ಯಕ್ಷರಾದ ಶ್ರೀಮತಿ ವೇದಾವತಿ ಉಪಸ್ಥಿತರಿದ್ದರು .
ಕಾರ್ಯಕ್ರಮ ಆಯೋಜಕರು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ವನಿತಾ ಸ್ವಾಗತಿಸಿ, ವೀಣಾ ಕಾರ್ಯಕ್ರಮ ನಿರೂಪಿಸಿದರು.