Tuesday, January 21, 2025
ಸುದ್ದಿ

ಡ್ರೈನೇಜ್ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಮನಪಾ ಅಧಿಕಾರಿಗಳಿಗೆ ಗಲೀಜು ನೀರಿನ ಅಭಿಷೇಕ ಗ್ಯಾರಂಟಿ-ಕಹಳೆ ನ್ಯೂಸ್

ಮಂಗಳೂರು ನಗರದ ಹೃದಯ ಭಾಗವಾದ ಸಿಟಿ ಸೆಂಟರ್ ಮಾಲ್‍ನ ಮುಂಭಾಗದ ಕೆಎಸ್ ರಾವ್ ರಸ್ತೆಯಲ್ಲಿ ಕಳೆದ ಹಲವಾರು ದಿನಗಳಿಂದ ಡ್ರೈನೇಜ್ ಅವ್ಯವಸ್ಥೆಯಿಂದಾಗಿ ಗಲೀಜು ನೀರು ರಾಜಾರೋಷವಾಗಿ ಹರಿದಾಡುತ್ತಿದ್ದರೂ, ನಗರ ಪಾಲಿಕೆಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರೂ ಇತ್ತ ಗಮನವೇ ಹರಿಸುತ್ತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಪರೀತ ವಾಹನಗಳ ಸಂಚಾರದಿಂದಾಗಿ ಅದೆಷ್ಟೋ ಪಾದಚಾರಿಗಳಿಗೆ ಗಲೀಜು ನೀರಿನ ಅಭಿಷೇಕವೂ ಆಗಿದೆ. ಇದೇ ರಸ್ತೆಯಲ್ಲಿ ವಿಶ್ವ ವಿಖ್ಯಾತ ಮಂಗಳೂರು ದಸರಾದ ಶೋಭಯಾತ್ರೆಯೂ ಹಾದು ಹೋಗಲಿದೆ. ಪಾಲಿಕೆಯಲ್ಲಿ ಚುನಾಯಿತ ಆಡಳಿತ ಸಂಸ್ಥೆ ಇಲ್ಲದಿದ್ದರೂ ನಗರ ದಕ್ಷಿಣದ ಶಾಸಕರು, ಆಯುಕ್ತರು, ಅಧಿಕಾರಿಗಳು ಕೂಡ ಗಮನ ಹರಿಸುತ್ತಿಲ್ಲ. ಅತೀ ಶೀಘ್ರದಲ್ಲಿ ಡ್ರೈನೇಜ್ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಮನಪಾ ಅಧಿಕಾರಿಗಳಿಗೆ ಗಲೀಜು ನೀರಿನ ಅಭಿಷೇಕ ಆಗುವುದಂತೂ ಗ್ಯಾರಂಟಿ.

ಜಾಹೀರಾತು
ಜಾಹೀರಾತು
ಜಾಹೀರಾತು