Monday, January 20, 2025
ಸುದ್ದಿ

ಬಂಟ್ವಾಳ: ಮದುವೆಯಾಗುವುದಾಗಿ ನಂಬಿಸಿ ವಂಚನೆ – ಯುವಕನ ವಿರುದ್ಧ ದೂರು- ಕಹಳೆ ನ್ಯೂಸ್

ಬಂಟ್ವಾಳ,: ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಮಾಡಿದ್ದು, ಇದೀಗ ಮನನೊಂದ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಮಲ್ಲೂರಿನ ಉಳಾಯಿಬೆಟ್ಟು ಸಮೀಪದ ಅಜರುದ್ದೀನ್ (30) ಯುವತಿಗೆ ವಂಚಿಸಿದ ಆರೋಪಿ. ಯಂಗ್ ಫ್ರೆಂಡ್ಸ್ ಉರ್ವ ಕ್ರಿಕೆಟ್ ಟೀಂನಲ್ಲಿ ಆರೋಪಿ ಅಝರುದ್ದೀನ್ ಗುರುತಿಸಿಕೊಂಡಿದ್ದನು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಅಜರುದ್ದೀನ್ ಬಂಟ್ವಾಳ ತಾಲೂಕಿನ ಯುವತಿಯನ್ನು ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದನು. ಮಾತ್ರವಲ್ಲ, ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದನು. ಈ ನಡುವೆ ಆರೋಪಿ ಅಝರುದ್ದೀನ್ ಯುವತಿಯನ್ನು ದೈಹಿಕವಾಗಿ ಬಳಸಿಕೊಳ್ಳಲು ಯತ್ನ ನಡೆಸಿದ್ದನು. ಈ ವೇಳೆ ಯುವತಿ ಮನೆಯವರಿಗೆ ವಿಚಾರ ತಿಳಿಸಿದ್ದು, ಯುವತಿಯ ಮನೆಯವರು ಮದುವೆ ಪ್ರಸ್ತಾಪವನ್ನು ಅಜರುದ್ದೀನ್ ಮತ್ತು ಆತನ ಮನೆಯವರ ಮುಂದಿಟ್ಟಿದ್ದರು. ಆದರೆ ಅಜರುದ್ದೀನ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ. ಇದೀಗ ಯುವಕನನ್ನು ಕೂಳೂರಿನಲ್ಲಿ ಬಂಧಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.