Saturday, November 23, 2024
ಕ್ರೀಡೆಸುದ್ದಿ

ಮಂಗಳೂರು: ಕರಾವಳಿಯಲ್ಲಿ ಕಂಬಳ ಕಲವರ ಆರಂಭ – ವೇಳಾಪಟ್ಟಿ ನಿಗದಿ-ಕಹಳೆ ನ್ಯೂಸ್

ಮಂಗಳೂರು : ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ನವೆಂಬರ್ ತಿಂಗಳ ಅಂತ್ಯದಿಂದ ಕಂಬಳದ ಋತು ಆರಂಭವಾಗಲಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳದ ಸ್ಪರ್ಧೆ ನಡೆಯಲಿದೆ.ಈ ಬಾರಿ ಕಾನೂನು ತೊಡಕು ಎದುರಾಗದೆ ಕಂಬಳ ಕ್ರೀಡೆ ನಿರ್ವಿಘ್ನವಾಗಿ ಆಯೋಜನೆಯಾಗಬಹುದು ಎಂಬ ಆಶಾವಾದ, ಕಂಬಳ ಆಯೋಜಕರ ಮತ್ತು ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಅಕ್ಟೋಬರ್ 6 ರಂದು ಮೂಡುಬಿದಿರೆಯಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ವೇಳಾ ಪಟ್ಟಿವನ್ನು ಸಿದ್ದಪಡಿಸಲಾಗಿದೆ. ಈ ಋತುವಿನ ಮೊದಲ ಕಂಬಳ ನವೆಂಬರ್ 23 ರಂದು ಆರಂಭವಾಗಲಿದೆ. ಒಟ್ಟಾರೆ 20 ಕಂಬಳ ಕ್ರೀಡೆ ವಿವಿಧೆಡೆ ನಡೆಯಲಿದೆ. ಒಂದೆರಡು ಕಂಬಳ ಕ್ರೀಡೆಗಳ ದಿನಾಂಕಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿರುವುದರಿಂದ ವೇಳಾಪಟ್ಟಿಯನ್ನು ಇನ್ನೂ ಕೂಡಾ ಅಧಿಕೃತವಾಗಿ ಘೋಷಿಸಲಾಗಿಲ್ಲ ಎಂದು ಮೂಲಗಳು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಿಳಿಸಿವೆ.

ತುಳುನಾಡಿನ ಸಂಸ್ಕೃತಿಯೊಂದಿಗೆ ಮಿಳಿತವಾದ ಕಂಬಳ ಕ್ರೀಡೆಯೂ 2014 ರಿಂದ ಸಾಕಷ್ಟು ಕಾನೂನು ಸಂಘರ್ಷಗಳನ್ನು ಎದುರಿಸಿದೆ. ಈ ನಡುವೆ 2016 – 17 ರಲ್ಲಿ ಕಾನೂನು ಸಂಘರ್ಷದಿಂದ ಸ್ಥಗಿತವಾಗಿತ್ತು. ಇದರ ವಿರುದ್ದ ಹೋರಾಡಿ ಕರಾವಳಿ ಕರ್ನಾಟಕದ ಜನರು ಕಂಬಳವನ್ನು ಮುಂದುವರೆಸಲು ಒಗ್ಗಟ್ಟಿನಲ್ಲಿ ಹೋರಾಡಿದ್ದರು. ಆ ಬಳಿಕ ರಾಷ್ಟ್ರಪತಿಗಳ ಅಧ್ಯಾದೇಶ ಮತ್ತು ಮಸೂದೆ ತಿದ್ದುಪಡಿಯ 2017 – 18 ಸಾಲಿನಿಂದ ಅಡೆತಡೆಗಳಿಲ್ಲದೆ ಮುಂದುವರಿಯುತ್ತಿದೆ.

ಕಂಬಳಕ್ಕೆ ತಡೆ ಕೋರಿ ಪೆಟಾ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬಾಕಿಯಿರುವ ಕಾರಣ ಸಂಪೂರ್ಣವಾಗಿ ಕಂಬಳ ಕ್ರೀಡೆ ಮೇಲೆ ಇರುವ ಆತಂಕ ಇನ್ನೂ ನಿವಾರಣೆ ಆಗಿಲ್ಲ.