Monday, January 20, 2025
ಸುದ್ದಿ

ಮಂಗಳೂರು ಫ್ರೆಂಡ್ಸ್ ಟೈಗರ್ಸ್ ವತಿಯಿಂದ ವಿಭಿನ್ನ ಪ್ರಯೋಗ ; ಹುಲಿ ನೃತ್ಯದ ಜೊತೆ ಪೌರಾಣಿಕ ಕಥೆಯ ಮೆರುಗು – ಕಹಳೆ ನ್ಯೂಸ್

ಮಂಗಳೂರು ; ಸ್ನೇಹ ಸೌರ್ಹಾದತೆಯೇ ಜೀವಾಳ ಎಂದು ನಂಬಿರುವ ಕರಾವಳಿಗರು ಹಬ್ಬ ಹರಿದಿನಗಳು ಬಂತೆಂದರೆ ಸಾಕು ಒಗ್ಗಟ್ಟಾಗಿ ಸಹೋದರತೆ ಸಾರುತ್ತಾರೆ. ಅದರಂತೆ ಕಳೆದ್ ಮೂರು ವರ್ಷಗಳಿಂದ ಇಲ್ಲೊಂದು ಯುವಕರ ತಂಡ ಸೌಹಾರ್ದತೆಯ ಚಟುವಟಿಕೆಯಿಂದಲೇ ಗಮನಸೆಳೆಯುತ್ತಿದೆ. ಸೌರ್ಹಾದತೆಯ ಸೆಳೆಯಾಗಿರುವ ಆ ತಂಡ ಮತ್ತಾವೂದೂ ಅಲ್ಲ ಅದೇ ಮಂಗಳೂರು ಫ್ರೆಂಡ್ಸ್ ಟೈಗರ್ಸ್ ಮುಳಿಹಿತ್ಲು.

ಜಾಹೀರಾತು
ಜಾಹೀರಾತು
ಜಾಹೀರಾತು

ಹತ್ತಾರು ಯುವಕರಿಂದ ಸ್ಥಾಪನೆಗೊಂಡ ಮಂಗಳೂರು ಫ್ರೆಂಡ್ಸ್ ಟೈಗರ್ಸ್ ಹಬ್ಬ ಹರಿದಿನಗಳ ಸಮಯದಲ್ಲಿ ಹುಲಿವೇಶ ಹಾಕುತ್ತಾರೆ. ಕಳೆದ ಮೂರು ವರ್ಷಗಳಿಂದ ದಸರಾ ಹುಲಿ ಎಂದು ನಾಮಾಂಕಿತ ಮಾಡಿ ದಸರಾ ಸಮಯದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಯುವಕರು ಜೊತೆಗೂಡಿ ಹುಲಿವೇಷ ಹಾಕುತ್ತಾರೆ. ಈ ಹುಲಿವೇಷ ಹಾಕುವಾಗ ಯಾವೊರೊಬ್ಬರೂ ಮದ್ಯಪಾನ, ದೂಮಪಾನ, ಮಾಂಸಾಹಾರವನ್ನು ಸೇವಿಸದಿರುವುದು ವಿಶೇಷತೆಯಾಗಿದೆ. ತಮ್ಮ ತಮ್ಮ ಧರ್ಮದ ಆಚಾರ ವಿಚಾರಗಳನ್ನು ಪಾಲಿಸುತ್ತಾ ಅನ್ಯ ಧರ್ಮದ ಬಗ್ಗೆ ಅಪಾರ ಗೌರವ ಇಟ್ಟು ಕೊಂಡಿರುವ ಈ ತಂಡದಲ್ಲಿ ಎಲ್ಲಾ ಧರ್ಮದ ಯುವಕರು ಇರುವುದು ವಿಶೇಷತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಸರಾದ ಹುಲಿ ಮಾತ್ರವಲ್ಲದೆ, ಗಣೇಶ ಚಥುರ್ತಿ, ಇಫ್ತಾರ್ ಕೂಟವನ್ನೂ ಸಹ ಹಮ್ಮಿಕೊಳ್ಳುವುದು ಈ ತಂಡದ ಮತ್ತೊಂದು ವಿಶೇಷತೆಯಾಗಿದೆ. ಹಾಗೇಯೇ ಬೇರೆ ಬೇರೆ ರೀತಿಯಾಗಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ ಈ ತಂಡ ಯುವಕರು.
ಕರಾವಳಿಯ ಜಾನಪದ ಕಲೆಯಾಗಿರುವ ಈ ಹುಲಿವೇಷ ದಸರಾ ಸಮಯದ ಪ್ರಮುಖ ಆಕರ್ಷಣೆಯಾಗಿದೆ. ಈ ಸಂಪ್ರಾದಾಯಿಕ ಕಲೆಯನ್ನು ಉಳಿಸಿಕೊಳ್ಳುವುದು ಇಂದಿನ ದಿನದಲ್ಲಿ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ನಮ್ಮ ತಂಡ ಹುಲಿವೇಷ ಹಾಕುವುದರ ಮೂಲಕ ಸಂಪ್ರದಾಯವನ್ನು ಉಳಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಅನ್ನುತ್ತಾರೆ ಜಾಸಿಮ್ ಎನ್.ಎಂ.ಸಿ

ಮಂಗಳೂರು ಫ್ರೆಂಡ್ಸ್ ಟೈಗರ್ಸ್ ರೂವಾರಿಯಾಗಿರುವ ನಿತಿನ್ ಆರ್ ಸಾಲ್ಯಾನ್ ಹೇಳುವಂತೆ ಎಲ್ಲಾ ಧರ್ಮದ ಯುವಕರು ಒಗ್ಗೂಡಿಕೊಂಡು ರಚಿಸಿರುವ ನಮ್ಮ ತಂಡವು ದಸರಾ ಸಮಯದಲ್ಲಿ ಹುಲಿವೇಷವನ್ನು ಹಾಕಿಕೊಂಡು ಬರುತ್ತಿದೆ. ಈ ಬಾರಿಯ ದಸರಾದಲ್ಲಿ ವಿನೂತನ ಪ್ರಯತ್ನ ಮಾಡಿದ್ದು ಈ ಪ್ರಯೋಗವನ್ನು ಜನರು ಮೆಚ್ಚಿಕೊಂಡಿದ್ದಾರೆ. ಅಂತೆಯೇ ಈ ತಂಡದಲ್ಲಿ ಎಲ್ಲಾ ಧರ್ಮದ ಯುವಕರು ಒಗ್ಗೂಡಿ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಂತೋಷ ತಂದಿದೆ.

ಹುಲಿ ನೃತ್ಯ: ವಿಭಿನ್ನ ಪ್ರಯತ್ನ
ದಸರಾ ಸಮಯದಲ್ಲಿ ಹುಲಿಗಳು ಸ್ಟಂಟ್, ವಿಭಿನ್ನ ವೇಷಗಳೊಂದಿಗೆ ಕಾಣಸಿಗುತ್ತದೆ. ಆದರೆ ಈ ಯುವಕರ ತಂಡ ಪ್ರತಿವರ್ಷವೂ ಒಂದೊಳ್ಳೆ ವಿಷಯ ಇಟ್ಟುಕೊಂಡು ಹುಲಿ ನೃತ್ಯ ಮಾಡುತ್ತಿದೆ. ಅಂತೆಯೇ ಈ ಸಾರಿಯೂ ಹುಲಿ ನೃತ್ಯವನ್ನು ವಿನೂತನವಾಗಿ ರೂಪಿಸಿದ್ದಾರೆ. ಮಹಿಷಾಸುರ ವಧೆಯ ಕಥಾನಕವನ್ನು ಇರಿಸಿಕೊಂಡು ಹುಲಿ ನೃತ್ಯ ಮಾಡಿದ್ದಾರೆ. ಮಂಗಳಾದೇವಿ ದೇವಸ್ಥಾನದಲ್ಲಿ ಪ್ರಾರಂಭಿಸಿ, ಮಹಿಷಮರ್ಧಿನಿ ಕ್ಷೇತ್ರ ಬೋಳಾರ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡಿ ಜನರ ಪ್ರಶಂಸೆಗೆ ಪಾತ್ರವಾಗಿದೆ. Éಒಟ್ಟಿನಲ್ಲಿ ಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗುವ ಈ ಮುಳಿಹಿತ್ಲು ಫ್ರೆಂಡ್ಸ್ ಟೈಗರ್ಸ್‍ನ ನಡೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
———————