Monday, January 20, 2025
ಸುದ್ದಿ

‘ಥಿಂಕ್ ಬಿಗ್’ ಶಿರ್ಷಿಕೆ ಅಡಿಯಲ್ಲಿ ಇನ್ನರ್ ವೀಲ್ ಕ್ಲಬ್ ಪುತ್ತೂರು ದಸರಾ ಸಂಭ್ರಮ –ಕಹಳೆ ನ್ಯೂಸ್

ಪುತ್ತೂರು – ‘ಥಿಂಕ್ ಬಿಗ್’ ವಿತ್ ಡಾ.ಮಾಲೀನಿ ಹೆಬ್ಬಾರ್ ಅನ್ನುವ ಶಿರ್ಷಿಕೆ ಅಡಿಯಲ್ಲಿ ಈ ಬಾರಿ ಇನ್ನರ್ ವೀಲ್ ಕ್ಲಬ್ ಪುತ್ತೂರು ವತಿಯಿಂದ ದಸರಾ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಇನ್ನರ್ ವೀಲ್ ಕ್ಲಬ್‍ನ ಮಾಜಿ ಜಿಲ್ಲಾಧ್ಯಕ್ಷರಾದ ಡಾ.ಮಾಲಿನಿ ಹೆಬ್ಬಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಮುಳೀಯಾ ಜೆ.ಸಿ.ಐ ಸಭಾಂಗಣದಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು.ವಿಜಯದಶಮಿಯ ಈ ಸಂಭ್ರಮದಲ್ಲಿ ಇನ್ನರ್ ವೀಲ್ ಕ್ಲಬ್‍ನ ನಾರಿಮಣಿಯರು ಕಪ್ಪು ಬಣ್ಣದ ಸೀರೆ ತೊಟ್ಟು ದಸರಾ ರಂಗನ್ನು ಮತ್ತಷ್ಟು ಹೆಚ್ಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 
ಸಂಪ್ರಾದಾಯಿಕವಾಗಿ ಆಚರಿಸಲ್ಪಟ್ಟ ಹಬ್ಬದಲ್ಲಿ ಅಕ್ಕಿ,ಹೂ,ಬಾಳೆಹಣ್ಣು,ಎಲೆ ಅಡಿಕೆ,ಅಷ್ಟ ಲಕ್ಷ್ಮೀ ವಿಗ್ರಹ,ಅರಶಿನ,ಕುಂಕುಮ,ಕಲಶ ಹಾಗೂ ಪ್ರಾಚೀನ ಕಾಲದಲ್ಲಿ ಭತ್ತ ಅಳೆಯಲು ಉಪಯೋಗಿಸುತ್ತಿದ್ದ ಕಲಸ್ ವಿವಿಧ ರೀತಿಯ ದೀಪಗಳು ಕಣ್ಮನ ಸೆಳೆಯಿತು.ಒಟ್ಟಿನಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಅಯೋಜಿಸಿದ್ದ ‘ಥಿಂಕ್ ಬಿಗ್’ ವಿಭಿನ್ನ ರೀತಿಯಲ್ಲಿ ದಸರಾ ಆಯೋಜನೆಗೆ ಸಾಕ್ಷಿಯಾಯಿತು.