Tuesday, January 21, 2025
ಸುದ್ದಿ

ಖಾತೆ ಬದಲಾವಣೆಗೆ 20,000 ರೂ. ಹಣ ಬೇಡಿಕೆ ಇಟ್ಟ ಹಳೆನೇರಂಕಿ ಗ್ರಾಮದ ವಿ.ಎ. ದುರ್ಗಪ್ಪ ; ಎಸಿಬಿ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಭ್ರಷ್ಟ ವಿ.ಎ. – ಕಹಳೆ ನ್ಯೂಸ್

ಪುತ್ತೂರು: ಖಾತೆ ಬದಲಾವಣೆಗೆ ಬೇಡಿಕೆ ಇಟ್ಟು, ಲಂಚ‌ ಪಡೆಯುತ್ತಿದ್ದ ಹಳೆನೇರಂಕಿ ಗ್ರಾಮದ ಗ್ರಾಮ ಕರಣಿಕ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ‌ ಬಿದ್ದಿದ್ದಾರೆ.

ಹಳೆನೇರಂಕಿ ವಿ.ಎ ಎಸಿಬಿ ಬಲೆಗೆಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬತ್ತನ ಹಳ್ಳಿ ನಿವಾಸಿ ದುರ್ಗಪ್ಪ (24) ಭ್ರಷ್ಟಾಚಾರ ‌ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಅಧಿಕಾರಿ. ಹಳೆನೇರಂಕಿ ಗ್ರಾಮದ ಕಾಪಿಕಾಡು‌ ನಿವಾಸಿಯೋರ್ವರು ದೊಡ್ಡಪ್ಪನ ಹೆಸರಿನಿಂದ‌ ತನ್ನ ಹೆಸರಿಗೆ ಜಾಗದ ಖಾತೆ ಬದಲಾವಣೆಗೆ ಫೆ.20 ರಂದು‌ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸೆ.12ರಂದು ಅರ್ಜಿದಾರರಿಗೆ ನೋಟಿಸು‌ ನೀಡಿದ್ದರು. ಬಳಿಕ ಖಾತೆ ಬದಲಾವಣೆಗೆ 20,000 ರೂ. ನೀಡುವಂತೆ ಬೇಡಿಕೆ‌ ಇಟ್ಟಿದ್ದರು. ಇದರ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ‌ದೂರು‌ ನೀಡಿದ್ದರು.ಖಾತೆ ಬದಲಾವಣೆಗೆ ಸತಾಯಿಸಿ, ಅ.10ರಂದು ತನ್ನದೇ ಬೈಕ್​ನಲ್ಲಿ‌ ಕುಳ್ಳಿರಿಸಿಕೊಂಡು ಬಂದು ನಗರ ಮುಖ್ಯ ರಸ್ತೆಯ ಕರ್ಣಾಟಕ ಬ್ಯಾಂಕ್ ಬಳಿ ಅರ್ಜಿದಾರರಿಂದ‌ ಹಣ‌ ಪಡೆಯುತ್ತಿದ್ದ ವೇಳೆ‌ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ‌ಬಿದ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು