Breaking News : ಅಂದಿನ ಕುಮಾರಸ್ವಾಮಿ ಮೈತ್ರಿ ಸರಕಾರಕ್ಕೆ ಹೈಕೋರ್ಟ್ ಛೀಮಾರಿ ; ಟ್ರೋಲ್ ಮಗಾ ಫೇಸ್ಬುಕ್ ಪೇಜ್ ನಲ್ಲಿ ಎಚ್.ಡಿ.ಕೆ ಕುಟುಂಬದ ಬಗ್ಗೆ ಅವಹೇಳನ ಪ್ರಕರಣ ರದ್ದುಗೊಳಿಸಿ, ಸರಕಾರಕ್ಕೆ 1 ಲಕ್ಷ ದಂಡ ವಿಧಿಸಿ, ಕಾನೂನು ಉಲ್ಲಂಘಿಸಿದ ಪೋಲೀಸರ ವಿರುದ್ಧ ತನಿಖೆಗೆ ಆದೇಶಿಸಿದ ಹೈಕೋರ್ಟ್ – ಕಹಳೆ ನ್ಯೂಸ್
ಬೆಂಗಳೂರು : ಫೇಸ್‌ಬುಕ್ ಪೇಜ್‌ನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ಪೋಸ್ಟ್ ಮಾಡಿ ಬಂಧನಕ್ಕೊಳಗಾಗಿದ್ದ ಆರೋಪಿ ಜಯಕಾಂತ್ ಗೆ ಹೈಕೋರ್ಟ್ ನಲ್ಲಿ ವಿಜಯ. ಕುಮಾರಸ್ವಾಮಿಯ ಸಂಮಿಶ್ರ ಸರಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ.
ಟ್ರೋಲ್ ಮಗಾ ಫೇಸ್ಬುಕ್ ಪೇಜ್ ನ ಪ್ರಕರಣದ ತನಿಖೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದ್ದು, ಕುಮಾರಸ್ವಾಮಿ ಸರಕಾರಕ್ಕೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ, ಛೀಮಾರಿ ಹಾಕಿದ್ದ, ಪೋಲೀಸರ ವಿರುದ್ಧವೂ ತನಿಖೆಗೆ ಆದೇಶಿದಲ್ಲದೆ, ಅಂದು ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದ ನ್ಯಾಯಾಧೀಶರನ್ನು ತನಿಖೆ ನಡೆಸಲು ಆದೇಶ ನೀಡಿದ್ದು, ಇದು ಕುಮಾರಸ್ವಾಮಿಯವರ ಸಂಮಿಶ್ರ ಸರ್ಕಾರವನ್ನು ತೀವ್ರ ಮುಖಬಂಗಕ್ಕೆ ಗುರಿಮಾಡಿದೆ.
ಪ್ರಕರಣವೇನು : ಟ್ರೋಲ್ ಮಗಾ ಪೇಜ್ ಅಡ್ಮಿನ್ ಜಯಕಾಂತ್ ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು ಹೀಗಾಗಿ, ಜಯಕಾಂತ್ ವಿರುದ್ಧ ಜೆಡಿಎಸ್ ಪಕ್ಷದ ಕಾರ್ಯಕರ್ತರು ಶ್ರೀರಾಂಪುರ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಈ ದೂರು ಸಂಬಂಧ ಸೆಷನ್ಸ್ ಕೋರ್ಟ್‌ನಲ್ಲಿ ಆರೋಪಿ ಜಾಮೀನು ತಂದು ದಾಖಲೆಗಳನ್ನು ಸಲ್ಲಿಸಲು ಠಾಣೆಗೆ ಹೋಗಿದ್ದ. ಈ ವೇಳೆ ಜಯಕಾಂತ್‌ನನ್ನು ಇನ್ನೊಂದು ಎಫ್‌ಐಆರ್ ದಾಖಲಿಸಿ ಬಂಧಿಸಿ, ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸರ ಈ ಕ್ರಮ ಪ್ರಶ್ನಿಸಿ ಜಯಕಾಂತ್ ಪರ ವಕೀಲ ಅರುಣ್ ಶ್ಯಾಮ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ಟ್ರೋಲ್ ಮಗ ಪೇಜ್ ಅಡ್ಮಿನ್ ಎಸ್.ಜಯಕಾಂತ್ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಯಾಕೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಕಾಂತ್ ಕೆಳ ನ್ಯಾಯಾಲಯದಲ್ಲಿ ತಾತ್ಕಾಲಿಕ ಜಾಮೀನು ಪಡೆದಿದ್ದರೂ ಮತ್ತೊಂದು ಪ್ರಕರಣದಲ್ಲಿ ಬಂಧಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ನ್ಯಾಯಪೀಠವು, ಈ ರಾಜ್ಯವನ್ನು ಜಂಗಲ್ ರಾಜ್ಯ ಎಂದು ತಿಳಿದುಕೊಂಡಿದ್ದೀರಾ ಎಂದು ಸರಕಾರದ ಪರ ವಕೀಲರ ವಿರುದ್ಧ ಕಿಡಿಕಾರಿದ್ದರು. ಎರಡು ಎಫ್‌ಐಆರ್ ತನಿಖೆಗೆ ತಡೆ ನೀಡಿ, ಆರೋಪಿ ಜಯಕಾಂತ್‌ನನ್ನು ತಕ್ಷಣವೇ ಬಿಡುಗಡೆಗೊಳಿಸಿ ಎಂದು ಆದೇಶಿಸಿ ವಿಚಾರಣೆಯನ್ನು ಮುಂದೂಡಿತು. ನಂತರ ವಿಚಾರಣೆ ನಡೆಸಿ ತೀರ್ಪನ್ನು ಕಾಯಿದಿರಿಸಿತ್ತು. ಅಂದಿನ ಸಂಮಿಶ್ರ ಸರಕಾರದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ವಕೀಲ ಎಂ.ಅರುಣ್ ಶ್ಯಾಮ್ ಹಾಜರಿದ್ದರು.