Sunday, November 24, 2024
ಸುದ್ದಿ

3 ವರ್ಷದಿಂದ ಹಾಸಿಗೆ ಹಿಡಿದ ಯುವಕನಿಗೆ ಬೇಕಿದೆ ದಾನಿಗಳ ನೆರವು – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಬೊಳಂತಿಮಾರ್ ನಿವಾಸಿ ನಾರಾಯಣ ಪೂಜಾರಿ ಮತ್ತು ಚಂದ್ರಾವತಿ ಅವರ ಪುತ್ರ ಸತೀಶ್ ಪೂಜಾರಿ (31) ಬೆನ್ನುಹುರಿ ಮುರಿತದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಮೂರು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣ ಕಾಮಗಾರಿಯ ಕೆಲಸಕ್ಕೆ ತೆರಳಿದ್ದ ಸತೀಶ್ ಪೂಜಾರಿ ಮೇಲಿನಿಂದ ಬಿದ್ದು ಗಾಯಗೊಂಡಿದ್ದರು.ಅಂದಿನಿಂದ ಇಂದಿನವರೆಗೆ ಸತೀಶ್ ಹಾಸಿಗೆಯಲ್ಲೆ ಇರುವ ಪರಿಸ್ಥಿತಿ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ್ದ ಸತೀಶ್ ರವರಿಗೆ ತಿಂಗಳಿಗೆ 8 ಸಾವಿರ ರೂಪಾಯಿ ಔಷಧಿಗಳಿಗೆ ಖರ್ಚು ತಗಲುತ್ತಿದೆ.ಹಿಂದಿನಂತೆ ಇವರು ಆರೋಗ್ಯವಂತರಾಗಲು ತಮಿಳುನಾಡಿನ ಸಿಎಂಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ.ಈಗಾಗಲೇ 25 ಲಕ್ಷ ಖರ್ಚು ತಗುಲಿದ್ದು ದಾನಿಗಳ ಸಹಕಾರ ನೆರವಿಗೆ ಬಂದಿದೆ.ಇನ್ನಷ್ಟು ಚಿಕಿತ್ಸೆಗಾಗಿ ದುಬಾರಿ ಖರ್ಚಾಗಲಿದ್ದು ದಾನಿಗಳ ಸಹಾಯಹಸ್ತ ಇವರಿಗೆ ಬೇಕಾಗಿದೆ.ಸಹೃದಯ ದಾನಿಗಳ ನೆರವು ಯುವಕನ ಜೀವನವನ್ನು ಮತ್ತೆ ಮರುಕಳಿಸುವಂತೆ ಮಾಡವಹುದು.ಸತೀಶ್ ಪೂಜಾರಿಗೆ ಸಹಾಯ ಮಾಡಲು ಇಚ್ಛಿಸಿವವರು ಸತೀಶ್ ಬಿ ವಿಜಯ ಬ್ಯಾಂಕ್ ಕುಂಬ್ರ ಪುತ್ತೂರು 124201012000104
IFSC. VIJB. 0001242 (9741160572)ಖಾತೆಗೆ ಜಮಾ ಮಾಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು