ಟೋಕಿಯೋ: ಜಪಾನ್ ದೇಶದ ರಾಜಧಾನಿ ಟೋಕಿಯೋ ನಗರಕ್ಕೆ ಭೀಕರ ಚಂಡಮಾರುತ ಅಪ್ಪಳಿಸಿದೆ. ಶನಿವಾರ ಅಪ್ಪಳಿಸಿದ ಈ ಚಂಡಮಾರುತಕ್ಕೆ ಇಬ್ಬರು ಬಲಿಯಾಗಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ನಗರದಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಕಳೆದ 60 ವರ್ಷಗಳಲ್ಲಿ ಇದೇ ಮೊದಲು ಈ ಪ್ರಮಾಣದ ಮಳೆಯಾಗುತ್ತಿದೆ ಎಂದು ಹೇಳಲಾಗಿದೆ. ಬರೋಬ್ಬರಿ ಆರು ಮಿಲಿಯನ್ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸಲಾಗಿದೆ.
ಈ ಚಂಡಮಾರುತಕ್ಕೆ ಹಗಿಬಿಸ್ ಎಂದು ಹೆಸರಿಡಲಾಗಿದೆ. ಹಗಿಬಿಸ್ ಎಂದರೆ ಫಿಲಿಫೈನ್ ಭಾಷೆಯಲ್ಲಿ ವೇಗ ಎಂದರ್ಥ.