Recent Posts

Monday, January 20, 2025
ಸುದ್ದಿ

ಸಣ್ಣ ಬಟ್ಟೆ ತೊಡುವಂತೆ ಮತ್ತು ಮದ್ಯ ಸೇವಿಸುವಂತೆ ನೂರ್ ಫಾತಿಮಾ ಎಂಬ ಮಹಿಳೆಗೆ ಒತ್ತಾಯ ; ವಿರೋಧಿಸಿದಕ್ಕೆ ತ್ರಿಪಲ್ ತಲಾಖ್ ನೀಡಿದ ಪತಿ ಇಮ್ರಾನ್ ಮುಸ್ತಾಫಾ..! – ಕಹಳೆ ನ್ಯೂಸ್‍

ಹೊಸದಿಲ್ಲಿ: ಆಧುನಿಕ ರೀತಿಯ ಬಟ್ಟೆಗಳನ್ನು ತೊಡುವಂತೆ ಮತ್ತು ಮದ್ಯ ಸೇವಿಸುವಂತೆ ಒತ್ತಾಯಿಸಿದ ಪತಿಯ ನಿರ್ಧಾರವನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯೋರ್ವರಿಗೆ ತ್ರಿವಳಿ ತಲಾಖ್ ನೀಡಿದ ಪ್ರಕರಣ ಬಿಹಾರದಲ್ಲಿ ವರದಿಯಾಗಿದೆ.

ನೂರ್ ಫಾತಿಮಾ ಎಂಬ ಮಹಿಳೆಗೆ ಆಕೆಯ ಪತಿ ಇಮ್ರಾನ್ ಮುಸ್ತಾಫಾ ತ್ರಿವಳಿ ತಲಾಖ್ ನೀಡಿದ್ದಾನೆ.  ಇವರು 2015ರಲ್ಲಿ ಮದುವೆಯಾಗಿದ್ದು ನಂತರ ದೆಹಲಿಯಲ್ಲಿ ವಾಸವಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಂಡ ಇಮ್ರಾನ್ ತನಗೆ ಸಣ್ಣ ಸಣ್ಣ ಬಟ್ಟೆ ಹಾಕುವಂತೆ ಒತ್ತಾಯಿಸುತ್ತಾನೆ. ರಾತ್ರಿ ಪಾರ್ಟಿಗೆ ಹೋಗುವಂತೆ, ಮದ್ಯವನ್ನು ಸೇವಿಸುವಂತೆ ಒತ್ತಾಯಿಸುತ್ತಾನೆ ಎಂದು ಮಹಿಳೆ ನೂರ್ ಫಾತಿಮಾ ಆರೋಪಿಸಿದ್ದಾರೆ.  ಆದರೆ ನಾನು ಇದಕ್ಕೆ ಒಪ್ಪದೆ ಇದ್ದಾಗ ನನಗೆ ಪ್ರತಿ ದಿನಾ ಹೊಡೆಯುತ್ತಿದ್ದ. ವರ್ಷಗಳಿಂದ ಹಿಂಸೆ ನೀಡುತ್ತಿದ್ದಾನೆ. ಕಳೆದ ಕೆಲವು ದಿನಗಳ ಹಿಂದೆ ಮನೆಬಿಟ್ಟು ಹೋಗು ಎಂದಿದ್ದ. ಅದಕ್ಕೆ ನಾನು ಒಪ್ಪದಿದ್ದಾಗ ತ್ರಿವಳಿ ತಲಾಖ್ ಕೊಟ್ಟಿದ್ದಾನೆ ಎಂದು ಫಾತಿಮಾ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೂರ್ ಫಾತಿಮಾ ರಾಜ್ಯ ಮಹಿಳಾ ಆಯೋಗದಲ್ಲಿ ದೂರು ದಾಖಲಿಸಿದ್ದು, ಇಮ್ರಾನ್ ಮುಸ್ತಾಫಾನಿಗೆ ನೋಟೀಸ್ ನೀಡಲಾಗಿದೆ.

ಭಾರತದಲ್ಲಿ ತ್ರಿಪಲ್ ತಲಾಖ್ ನೀಡುವುದನ್ನು ನಿಷೇಧಿಸಲಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ.