Recent Posts

Sunday, January 19, 2025
ರಾಜಕೀಯ

ಬೀಚ್ ಕ್ಲೀನಿಂಗ್ ವೇಳೆ ಮೋದಿ ಕೈಯಲ್ಲಿದಿದ್ದೇನು? ಕೊನೆಗೂ ಉತ್ತರಿಸಿದ ಪ್ರಧಾನಿ – ಕಹಳೆ ನ್ಯೂಸ್‍

ಚೆನ್ನೈ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ವೇಳೆ ಮಮ್ಮಲಾಪುರಂ ಬೀಚ್ ನಲ್ಲಿ ವಾಕಿಂಗ್ ಮಾಡಿದ್ದ ಪ್ರಧಾನಿ ಮೋದಿ ಬೀಚ್ ಕ್ಲೀನಿಂಗ್ ನಲ್ಲಿ ತೊಡಗಿದ್ದರು. ಆದರೆ ಮೋದಿ ಬೀಚ್ ಕ್ಲೀನಿಂಗ್ ಗಿಂತ ಅವರ ಕೈಯಲ್ಲಿದ್ದ ವಸ್ತುವೊಂದು ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ವಸ್ತು ಏನು ಎಂದು ಇದೀಗ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

 

ನಿನ್ನೆ ತಮಿಳುನಾಡಿನ ಮಹಾಬಲಿಪುರಂನ ಬೀಚ್ ನಲ್ಲಿ ಬೆಳ್ಳಂಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ  ಜಾಗಿಂಗ್ ​ ಮಾಡಿದ್ದರು. ಈ ವೇಳೆ ಜಾಗಿಂಗ್​​ ಮಾಡುತ್ತಾ ಕಸವನ್ನ ಆಯ್ದು ಸ್ವಚ್ಛ ಮಾಡಿದರು.. ಮೋದಿ ಸುಮಾರು ಅರ್ಧ ಗಂಟೆ ಕಾಲ ಸಮುದ್ರ ತೀರದಲ್ಲಿ ಕಸ ಹಾಗೂ ಪ್ಲಾಸ್ಟಿಕ್​​ ಬಾಟಲ್ ​ಗಳನ್ನ ಆಯ್ದು ಸ್ವಚ್ಛತೆ ಪಾಠ ಮಾಡಿದ್ರು. ಈ ವೇಳೆ ಅವರ ಕೈಯಲ್ಲಿದ್ದ ವಸ್ತುವೊಂದು ಜನರಲ್ಲಿ ಕುತೂಹಲ ಮೂಡಿಸಿತ್ತು. ಇದಕ್ಕೆ ಸ್ವತಃ ಮೋದಿಯೇ ಇಂದು ಉತ್ತರ ಕೊಟ್ಟಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಪ್ಲಾಗಿಂಗ್ ಮಾಡುವಾಗ ನನ್ನ ಕೈಯಲ್ಲಿ ಇದ್ದಿದ್ದು ಏನು ಅಂತ ನಿನ್ನೆಯಿಂದ ಸಾಕಷ್ಟು ಜನ ಕೇಳ್ತಿದ್ದೀರ. ಅದೊಂದು ಆ್ಯಕ್ಯೂಪ್ರೆಶರ್​ ರೋಲರ್​. ನಾನು ಆಗಾಗ ಅದನ್ನು ಬಳಸುತ್ತೇನೆ. ಇದರಿಂದ ನನಗೆ ತುಂಬಾ ಉಪಯೋಗವಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ. ಆ ಮೂಲಕ ಜನರಲ್ಲಿದ್ದ ಪ್ರಶ್ನೆ ಮತ್ತು ಗೊಂದಲಕ್ಕೆ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.