ಚಂಡೀಗಢ: ಪೋರ್ನ್ ವೆಬ್ಸೈಟಿನಲ್ಲಿ ಪತ್ನಿ ತನ್ನ ಸ್ನೇಹಿತನೊಂದಿಗೆ ಸೆಕ್ಸ್ ಮಾಡುತ್ತಿರುವ ವಿಡಿಯೋ ನೋಡಿ ಪತಿ ಶಾಕ್ ಆಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಆರೋಪಿ ಸುನಿಲ್ ನನ್ನ ಸ್ನೇಹಿತ. ಆತನನ್ನು ನಂಬಿ ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ನನಗೆ ಮೋಸ ಮಾಡಿದ್ದಾನೆ. ಈಗ ನನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಆ ವಿಡಿಯೋವನ್ನು ಪೋರ್ನ್ ಸೈಟಿಗೆ ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರಿಗೆ ಪತಿ ಸುನಿಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ ? : ಹರಿಯಾಣದ ಗುರುಗ್ರಾಮದಲ್ಲಿ ಅನಿಲ್ ತನ್ನ ಪತ್ನಿ ಸೀಮಾ ಜೊತೆ ವಾಸಿಸುತ್ತಿದ್ದರು. ಅನಿಲ್ ಸ್ನೇಹಿತ ಸುನಿಲ್ ಆಗಾಗ ಮನೆಗೆ ಬರುತ್ತಿದ್ದನು. ಈ ವೇಳೆ ಆತನ ಸ್ನೇಹಿತ ಅನಿಲ್ ಪತ್ನಿಯನ್ನು ಪರಿಚಯ ಮಾಡಿಕೊಂಡಿದ್ದನು. ಬಳಿಕ ಇಬ್ಬರೂ ಸ್ನೇಹಿತರಾಗಿ ಸೀಮಾಗೆ ಆರೋಪಿ ಸುನಿಲ್ ದುಬಾರಿ ಬೆಲೆಯ ಉಡುಗೊರೆಗಳನ್ನು ತಂದು ಕೊಡುತ್ತಿದ್ದನು. ದಿನಕಳೆದಂತೆ ಅನಿಲ್ ಮನೆಯಲ್ಲಿ ಇಲ್ಲದಿದ್ದಾಗ ಪತ್ನಿ ಸೀಮಾಗೆ ಹಣ ಕೊಡುವುದಾಗಿ ಹೇಳಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಸೀಮಾ ಪತಿಗೆ ಮೋಸ ಮಾಡಿ ಆತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇತ್ತ ಸುನಿಲ್ ಸೀಮಾಗೆ ಕೊಡಲು ಹಣವಿಲ್ಲದಿದ್ದಾಗ ಒಂದು ಪ್ಲಾನ್ ಮಾಡಿದ್ದನು. ಸೆಕ್ಸ್ ವಿಡಿಯೋವನ್ನು ಪೋರ್ನ್ ವೆಬ್ಸೈಟಿಗೆ ಅಪ್ಲೋಡ್ ಮಾಡಿದರೆ ಹೆಚ್ಚಿನ ಹಣ ಸಿಗುತ್ತದೆ ಎಂದು ಸೀಮಾಗೂ ಹೇಳಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ.
ಕೆಲ ದಿನಗಳ ನಂತರ ಪತಿ ಅನಿಲ್ಗೆ ಪತ್ನಿಯ ಅನೈತಿಕ ಸಂಬಂಧ ಗೊತ್ತಾಗಿದೆ. ಆಗ ಅನಿಲ್ ಪತ್ನಿಯ ಫೋನ್ ತೆಗೆದುಕೊಂಡು ನೋಡಿದಾಗ ಸುನಿಲ್ ಜೊತೆ ಸೆಕ್ಸ್ ಮಾಡಿರುವ ಅನೇಕ ವಿಡಿಯೋಗಳು ಕಂಡುಬಂದಿದೆ. ಆಗ ಸೀಮಾ, ಸುನಿಲ್ ನನ್ನನ್ನು ಬೆದರಿಸಿ ವಿಡಿಯೋಗಳನ್ನು ಮಾಡಿಕೊಂಡಿದ್ದನು ಎಂದು ಪತಿಗೆ ಸುಳ್ಳು ಹೇಳಿದ್ದಾಳೆ. ಕೊನೆಗೆ ಅನಿಲ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಸುನಿಲ್ನನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಸಾಕ್ಷ್ಯಗಳಿಗಾಗಿ ಸುನಿಲ್ ಮತ್ತು ಸೀಮಾಳ ಫೋನ್ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.