Wednesday, November 27, 2024
ಸುದ್ದಿ

ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ ಇನ್ ಲ್ಯಾಂಡ್ ಮಯೂರ ಮೇಳ-ಕಹಳೆ ನ್ಯೂಸ್

ಪುತ್ತೂರು: ಕರಾವಳಿ ಪ್ರದೇಶದ ಪ್ರಮುಖ ಕಟ್ಟಡ ನಿರ್ಮಾಣ ಸಂಸ್ಥೆಯಾಗಿರುವ ಇನ್-ಲ್ಯಾಂಡ್ ಬಿಲ್ಡರ್ಸ್ ಪುತ್ತೂರಿನಲ್ಲಿ ಆಯೋಜಿಸಿರುವ ಇನ್ ಲ್ಯಾಂಡ್ ಮಯೂರ ಮೇಳ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ.ಪುತ್ತೂರಿನ ಬಂಟರ ಭವನದ ಎದುರುಗಡೆ ನಿರ್ಮಾಣವಾಗುತ್ತಿರುವ ಇನ್ ಲ್ಯಾಂಟ್ ಮಯೂರ ಮೇಳ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ದೊರಕಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕನಸಿನ ಮನೆಯನ್ನು ಹೊಂದಲು ಪುತ್ತೂರು ಹಾಗೂ ಸುತ್ತಮುತ್ತಲಿನ ಜನತೆಗೆ ಸುವರ್ಣಾವಕಾಶ ಇದ್ದಾಗಿದ್ದ ಈ ಮೇಳವು ಅಕ್ಟೋಬರ್ 14 ರಿಂದ 28 ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ.ಅತ್ಯಾಕರ್ಷಕ ವಿನೂತನ ವಿನ್ಯಾಸದ ಮನೆಗಳು 3 ಲಕ್ಷದಿಂದ 9 ಲಕ್ಷಗಳ ರಿಯಾಯತಿ ದರದಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ. Pಒಂಙ ಯೋಜನೆಯಡಿ 2.35 ಲಕ್ಷಗಳ ಅಧಿಕ ಲಾಭ ಪಡೆಯಬಹುದಾಗಿದೆ.PMAY ಅರ್ಪಾಟ್‍ಮೆಂಟ್‍ಗಳಿಗೆ 8%ದಷ್ಟು ಜಿಎಸ್‍ಟಿ ಇಳಿಸಲಾಗಿದ್ದು ಸುಲಭವಾಗಿ ಕಾರ್ಪೋರೇಷನ್ ಬ್ಯಾಂಕ್ ವತಿಯಿಂದ ಗೃಹ ಸಾಲ ಕೂಡ ದೊರೆಯಲಿದೆ.ಹೆಚ್ಚಿನ ಮಾಹಿತಿಗಾಗಿ 96 86 06 43 12 ಗೆ ಸಂಪರ್ಕೀಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸ್ಥೆಯ ಸೀನಿಯರ್ ಮ್ಯಾನೇಜರ್ (ಮಾರ್ಕೆಟಿಂಗ್ ಆಯಂಡ್ ರೇರಾ ಕಂಪ್ಲಾಯನ್ಸ್) ಉಲ್ಲಾಸ ಕದ್ರಿ ಮಾತನಾಡಿ ಗುಣ ಮಟ್ಟ ಹಾಗೂ ವಿಶ್ವಾಸಾರ್ಹತೆಯಿಂದಾಗಿ ಇನ್-ಲ್ಯಾಂಡ್ ಮನೆಯೊಂದನ್ನು ಖರೀದಿಸಬೇಕು ಎಂದು ಸದಾ ಬಯಸುತ್ತಿದ್ದವರಿಗೆ ಈ ಮೇಳ ತಮ್ಮ ಕನಸಿನ ಮನೆಯನ್ನು ಖರೀದಿಸಲು ಸುವರ್ಣಾವಕಾಶವಾಗಿ ಪರಿಣಮಿಸಿದೆ. ಗ್ರಾಹಕರ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿರುವ ಸಂಸ್ಥೆಯು ಹಲವಾರು ಆಕರ್ಷಕ ಆಫರ್‍ಗಳನ್ನು ನೀಡಿದೆ ಎಂದರು.

ಇನ್ ಲ್ಯಾಂಡ್ ಬಿಲ್ಡರ್ಸ್ ಮಾಲಕರಾದ ಸಿರಾಜ್ ಅಹ್ಮದ್ ಮಾತನಾಡಿ ಈಗಾಗಲೇ 60% ದಷ್ಟು ಸೋಲ್ಡ್ ಔಟ್ ಆಗಿದ್ದು ಹೆಚ್ಚೆಚ್ಚು ಸಂಖ್ಯೆಯಲ್ಲಿ ಗ್ರಾಹಕರು ಕೊಳ್ಳುವತ್ತ ಆಕರ್ಷಕರಾಗುತ್ತಿದ್ದಾರೆ. ಪರ್ಲ್ ಸಿಟಿ ಪುತ್ತೂರಿನಲ್ಲಿ ಬ್ಯೂಸಿನೆಸ್ ಹೂಡಿಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು ಮಿನಿ ಮಾರ್ಕೇಟ್,ಕ್ಲಿನಿಕ್,ಲಾ ಚೇಂಬರ್ ಹೀಗೆ ಬ್ಯುಸಿನೆಸ್ ಹಬ್‍ಗೆ ಇಲ್ಲಿದೆ ವಿನೂತನ ಅವಕಾಶ.ಇನ್ನು 72 ಮನೆಗಳ ಅರ್ಪಾಟ್ಮೆಂಟ್ ವಿಥ್ ಸಿಸಿಟಿವಿ ಕ್ಯಾಮೆರಾ 2 ಲಿಫ್ಟ್ ಹಾಗೂ ಪ್ರತಿ ಮನೆಯ ಅಗತ್ಯತೆಗೆ ಅನುಸಾರವಾಗಿ ನಿರ್ಮಾಣಗೊಳ್ಳುತ್ತಿದೆ ಎಂದರು.

ಮೇಳದ ಉದ್ಘಾಟಕರಾಗಿ ಚಿಕ್ಕಪ್ಪ ನಾಯ್ಕ್ ಮಾತನಾಡಿ ಕಾಮಗಾರಿ ಹಾಗೂ ಗುಣಮಟ್ಟದಲಿ ರಾಜಿ ಮಾಡದೆ ಅತ್ಯಾಧುನಿಕ ಶೈಲಿಯ ಫ್ಲಾಟ್ ಕೈಗೆಟಕುವ ದರದಲ್ಲಿ ಲಭ್ಯವಿದೆ.ಈ ಮೇಳವು ಈಗಾಗಲೇ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಾಣುತ್ತಿದ್ದು ಒಬ್ಬ ಬಿಲ್ಡರ್ ಉತ್ತಮ ಗುಣಮಟ್ಟದ ವಸತಿ ಸಮುಚ್ಚಯಗಳನ್ನು ಸಮಂಜಸವಾದ ಬೆಲೆಗೆ ನೀಡಿದರೆ ಗ್ರಾಹಕರಿಂದ ಹೆಚ್ಚಿನ ಪ್ರಮಾಣದ ಬೇಡಿಕೆ ಇರುತ್ತದೆ ಎಂಬುದಕ್ಕೆ ಈ ಮೇಳ ಸಾಕ್ಷಿ ಎಂದರು.
ಕಾರ್ಪೋರೇಷನ್ ಬ್ಯಾಂಕ್ ಹೆಡ್ ಆಫೀಸ್ ರಿಟೇಲ್ ಲೇಡಿಂಗ್ ಡಿವಿಜನ್ ಜನರಲ್ ಮ್ಯಾನೇಜರ್ ವಿ.ಶ್ರೀಧರ್ ಕಾರ್ಪೋರೇಷನ್ ಬ್ಯಾಂಕ್ ಗೃಹ ಸಾಲದ ಅಡಿಯಲ್ಲಿ ರಿಯಾಯತಿ ಬಡ್ಡಿ ದರದಲ್ಲಿ ಅತೀ ಶೀಘ್ರದಲ್ಲಿ ಸಾಲ ಮಂಜೂರು ಮಾಡಲಾಗುವುದು.ಕಡಿಮೆ ದಾಖಲೆಗಳೊಂದಿಗೆ ಆಕರ್ಷಕ ರೀತಿಯಲ್ಲಿ ಹೋಂ ಲೋನ್ ಗ್ರಾಹಕರ ಉಪಯೋಗವಾಗಲಿದೆ ಎಂದರು.

ಇನ್ನು ವಕೀಲರಾದ ಮಹೇಶ್ ಕಜೆ ಮಾತನಾಡಿ ಚಿಕ್ಕಪ್ಪ ನಾಯ್ಕ್ ಹಾಗೂ ಸಿರಾಜ್ ಅಹ್ಮದ್‍ರ ಒಗ್ಗೂಡಿವಿಕೆಯೆ ಪುತ್ತೂರಿನಲ್ಲಿ ಹಾಲು ಜೇನು ಸಂಗಮವಾದಂತೆ.ಮುಂದುವರಿಯುತ್ತಿರುವ ತಾಲೂಕಾದ ಪುತ್ತೂರಿನಲ್ಲಿ ಇಂತಹ ಬ್ಯುಸಿನೆಸ್ ಹಬ್ ಹಾಗೂ ಲಕ್ಷುರಿಯಸ್ಸ್ ಪಾರ್ಪಟಿ ಅವಶ್ಯಕತೆ ಇದೆ.ಇನ್ ಲ್ಯಾಂಡ್ ಪಾರ್ಪಟಿಯ ಕಾಮಗಾರಿಗಳು ಸಂಪೂರ್ಣವಾಗಿ ಟಾಪ್ ಟೂ ಬಾಟಮ್ ಪರ್ಫೆಕ್ಟ್ ಆಗಿರುತ್ತದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಮೇಳದ ಉದ್ಘಾಟಕರಾಗಿ ಚಿಕ್ಕಪ್ಪ ನಾಯ್ಕ್ ಇನ್ ಲ್ಯಾಂಡ್ ಬಿಲ್ಡರ್ಸ್ ಮಾಲಕರಾದ ಸಿರಾಜ್ ಅಹ್ಮದ್ ಗೌರವ ಅತಿಥಿಗಳಾಗಿ, ಕಾರ್ಪೋರೇಷನ್ ಬ್ಯಾಂಕ್ ಹೆಡ್ ಆಫೀಸ್ ರಿಟೇಲ್ ಲೇಡಿಂಗ್ ಡಿವಿಜನ್ ಜನರಲ್ ಮ್ಯಾನೇಜರ್ ವಿ.ಶ್ರೀಧರ್,ಡಾ.ಬಿ.ಶ್ಯಾಮ್,ವಕೀಲರಾದ ಮಹೇಶ್ ಕಜೆ,ಉದ್ದಿಮೆದಾರರಾದ ಸುರೇಂದ್ರ ಕಿಣಿ ಮೊದಲಾದವರು ಉಪಸ್ಥಿತರಿದ್ದರು.