Wednesday, November 27, 2024
ಸುದ್ದಿ

ಮಂಡೆಕೋಲು ಪೋಕ್ಸೋ ಕಾಯಿದೆ ಕುರಿತು ಮಾಹಿತಿ ಕಾರ್ಯಾಗಾರ -ಕಹಳೆ ನ್ಯೂಸ್

ಮಂಡೆಕೋಲು ಪೋಕ್ಸೋ ಕಾಯಿದೆ ಕುರಿತು ಮಾಹಿತಿ ಕಾರ್ಯಾಗಾರ -ಕಹಳೆ ನ್ಯೂಸ್
ಮಂಡೆಕೋಲು ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ಸಮಾಜಕಾರ್ಯ ವಿಭಾಗ ಇದರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಮಂಡೆಕೋಲು ಹಾಗೂ ನವೋದಯ ಸ್ವಸಹಾಯ ಸಂಘ

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಡೆಕೋಲು ಇದರ ಸಹಯೋಗದೊಂದಿಗೆ ಅಕ್ಟೋಬರ್ 10ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಂಡೆಕೋಲು ಇದರ ಸಭಾಭವನದಲ್ಲಿ ಪೋಕ್ಸೋ ಕಾಯಿದೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ್ ಕಣೆಮರಡ್ಕ ವಹಿಸಿದ್ದರು. ಶಿವಪ್ರಸಾದ್ ಉಗ್ರಾಣಿಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಒ ಖ ಹರೀಶ್ ಹಾಗೂ ಕೆವಿಜಿ ಕಾನೂನು ಮಹಾವಿದ್ಯಾಲಯದ ಸಹಪ್ರಾಧ್ಯಪಕರಾದ ಕೌಶಿಕ್ ಸಿ ಪೋಕ್ಸೋ ಕಾಯಿದೆ ಕುರಿತು ಮಾಹಿತಿ ನೀಡಿದರು.

ನವೋದಯ ಸ್ವ ಸಹಾಯ ಸಂಘಗಳ ಪ್ರೇರಕರಾದ ಶ್ರೀಮತಿ ಸಂಧ್ಯಾ ಪ್ರಾರ್ಥಿಸಿದರು. ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಥಮ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಶಶಿಕಲಾ ಜಿ ಕಾರ್ಯಕ್ರಮ ನಿರೂಪಿಸಿದರು. ತುಳಸಿ ಪಿ ಸ್ವಾಗತಿಸಿದರು. ಜೋನ್ಸ್ ಬಾಬು ವಂದಿಸಿದರು. ವೇದಿಕೆಯಲ್ಲಿ ಮಂಡೆಕೋಲು ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿಯಾದ ಜಯಪ್ರಕಾಶ್, ಸುಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಟೇಬಲ್ ದೇವರಾಜ್, ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಗುರುರಾಜ್ ಅಜ್ಜಾವರ , ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕುಮಾರಿ ಪುನೀತಾ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.