ರಫೆಲ್ ಯುದ್ಧ ವಿಮಾನ ಮೊದಲೇ ಭಾರತೀಯ ವಾಯುಪಡೆಯಲ್ಲಿ ಇರುತ್ತಿದ್ದರೆ, ಬಾಲಾಕೋಟ್‍ನಲ್ಲಿ ಉಗ್ರರ ಶಿಬಿರ ತಾಣವನ್ನು ಪ್ರವೇಶಿಸಿ ದಾಳಿ ಮಾಡುವ ಅಗತ್ಯವಿರಲಿಲ್ಲ : ರಕ್ಷಣಾ ಸಚಿವ ರಾಜನಾಥ್ ಸಿಂಗ್-ಕಹಳೆ ನ್ಯೂಸ್
ಥಾಣೆ: ರಫೆಲ್ ಯುದ್ಧ ವಿಮಾನ ಮೊದಲೇ ಭಾರತೀಯ ವಾಯುಪಡೆಯಲ್ಲಿ ಇರುತ್ತಿದ್ದರೆ, ಪಾಕಿಸ್ತಾನದ ಬಾಲಾಕೋಟ್‍ನಲ್ಲಿ ಉಗ್ರರ ಶಿಬಿರ ತಾಣವನ್ನು ಪ್ರವೇಶಿಸಿ ದಾಳಿ ಮಾಡುವ ಅಗತ್ಯವಿರಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ, ಬಿಜೆಪಿ ಅಭ್ಯರ್ಥಿ ಮೀರಾ ಬಯಂದರ್ ಅವರ ಪರವಾರಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫ್ರಾನ್ಸ್‍ನಲ್ಲಿ ಇತ್ತೀಚೆಗೆ ರಫೆಲ್ ಯುದ್ಧ ವಿಮಾನವನ್ನು ಬರಮಾಡಿಕೊಳ್ಳುವಾಗ ಆಯುಧ ಪೂಜೆಯ ಶಾಸ್ತ್ರಗಳನ್ನು ನೆರವೇರಿಸಿದ್ದನ್ನು ತಿಳಿಸಿದರು.
ಭಾರತೀಯ ವಾಯುಪಡೆಯಲ್ಲಿ ಮೊದಲೇ ರಫೆಲ್ ಯುದ್ಧ ವಿಮಾನವಿರುತ್ತಿದ್ದರೆ ಬಲಾಕೋಟ್ ನೊಳಗೆ ಪ್ರವೇಶಿಸಿ ವಾಯುದಾಳಿ ನಡೆಸುವ ಅಗತ್ಯವಿರಲಿಲ್ಲ. ಭಾರತದೊಳಗೆ ಕುಳಿತಲ್ಲಿಂದಲೇ ಬಾಲಾಕೋಟ್ ಮೇಲೆ ದಾಳಿ ನಡೆಸಿ ಉಗ್ರರ ತಾಣವನ್ನು ಹೊಡೆದುರುಳಿಸಬಹುದಾಗಿತ್ತು ಎಂದರು.
ರಫೆಲ್ ಯುದ್ಧ ವಿಮಾನವನ್ನು ಭಾರತ ಖರೀದಿಸಿದ್ದು ಆತ್ಮ ರಕ್ಷಣೆಗೆ ಹೊರತು ಬೇರೆ ದೇಶಗಳ ಮೇಲೆ ಜಿದ್ದಿನಿಂದಲ್ಲ ಎಂದು ಸ್ಪಷ್ಟಪಡಿಸಿದರು.