Recent Posts

Tuesday, November 26, 2024
ಸುದ್ದಿ

ಕರಾವಳಿಯಲ್ಲಿ ಅತ್ಯಾಧುನಿಕ ಕಾವಲು ಹಡಗು ವರಾಹ ಕೋಸ್ಟ್ ಗಾರ್ಡ್ ಕೇಂದ್ರಕ್ಕೆ ಸೇರ್ಪಡೆ- ಕಹಳೆ ನ್ಯೂಸ್

ಸುರತ್ಕಲ್: ರಾಜ್ಯ ಕರಾವಳಿಯಲ್ಲಿ ಕಣ್ಗಾವಲು ಮತ್ತು ಗಸ್ತು ಬಲಪಡಿಸುವುದಕ್ಕಾಗಿ ಅತ್ಯಾಧುನಿಕ ಕಾವಲು ಹಡಗು, ವರಾಹ ಕೋಸ್ಟ್ ಗಾರ್ಡ್ ಕೇಂದ್ರಕ್ಕೆ ಮಂಗಳವಾರ ಸೇರ್ಪಡೆಯಾಗಿದೆ.

ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ ಮತ್ತು ತಪಾಸಣೆ, ಭದ್ರತೆಯ ಕಣ್ಗಾವಲಿಗೆ ಈ ವರಾಹ ಹಡಗನ್ನು ಉಪಯೋಗಿಸಲಾಗುತ್ತದೆ. ಎಲ್ ಆಂಡ್ ಟಿ ಕಂಪೆನಿಯು ಈ ನೂತನ ಹಡಗನ್ನು ನಿರ್ಮಾಣ ಮಾಡಿದೆ.
ಈ ಹಡಗಿನಲ್ಲಿ 14 ಅಧಿಕಾರಿಗಳು ಮತ್ತು 89 ಸಿಬ್ಬಂದಿಗಳು ಇರಲಿದ್ದಾರೆ. ಪಶ್ಚಿಮ ಕೋಸ್ಟ್ ಗಾರ್ಡ್ ಕಮಾಂಡಿಂಗ್ ಕೇಂದ್ರದಡಿಯಲ್ಲಿ ಕಾರ್ಯ ನಿರ್ವಹಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತುರ್ತು ಸಂದರ್ಭಗಳಲ್ಲಿ 2 ಎಂಜಿನ್‍ಗಳ ಹೆಲಿಕಾಪ್ಟರ್ ಹೊತ್ತೊಯ್ಯಬಲ್ಲ ಸಾಮಥ್ರ್ಯವುಳ್ಳ ‘ವರಾಹ’ 30 ಎಂ.ಎಂ ಗನ್, 12.7 ಎಂ.ಎಂ ಗನ್, ರಾಡಾರ್, ಸೆನ್ಸರ್, ಹೈಸ್ಪೀಡ್ ಬೋಟ್ ಗಳನ್ನು ಇದು ಹೊಂದಿರಲಿದೆ. ಅತ್ಯಾಧುನಿಕ ವರಾಹ ಹಡಗಿನ ಆಗಮನದಿಂದ ಕರಾವಳಿ ರಕ್ಷಣೆಗೆ ಹೊಸ ಶಕ್ತಿ ತುಂಬಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು