ಪುತ್ತೂರು : 2004ರಲ್ಲಿ ನಡೆದಿದ್ದ ಗ್ರಾ.ಪಂ ಸದಸ್ಯೆಯೋರ್ವರ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ 34ನೇ ನೆಕ್ಕಿಲಾಡಿಯ ತಾಳೆಹಿತ್ಲು ನಿವಾಸಿ ಹಿತೇಶ್ ಗೌಡರವವನ್ನು ದೋಷಮುಕ್ತಗೊಳಿಸಿ ಮಂಗಳೂರಿನ 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಲಯ ತೀರ್ಪು ನೀಡಿದೆ.
34ನೇ ನೆಕ್ಕಿಲಾಡಿ ಗ್ರಾಮದ ತಾಳೆಹಿತ್ಲು ನಿವಾಸಿ ಹಿತೇಶ್ ಗೌಡ ಹಾಗೂ ಹೀತೇಶ್ ಗೌಡರವರ ಸ್ನೇಹಿತನಾದ 34ನೇ ನೆಕ್ಕಿಲಾಡಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ನಿವಾಸಿ ಗಿರೀಶ್ ಯಾನೆ ಗಿರಿ ಎಂಬವರು ಸೇರಿಕೊಂಡು 2004ರ ಆಗಸ್ಟ್ 29ರಂದು ರಾತ್ರಿ 11.30ರ ವೇಳೆಗೆ ತಣ್ಣೀರುಪಂಥ ಗ್ರಾಮ ಪಂ ಸದಸ್ಯೆಯಾಗಿದ್ದ ಕರಾಯ ಪೂಂಜಾಲದ ಮಹಿಳೆಯ ಮನೆಗೆ ನುಗ್ಗಿ ಆಕೆಯ ಪತಿ ಮತ್ತು ಮಕ್ಕಳ ಎದುರಲ್ಲೇ ಆಕೆಯನ್ನು ಅಮಾನುಷಾವಾಗಿ ಅತ್ಯಾಚಾರ ನಡೆಸಿದ್ದಲ್ಲದೆ, ಮಹಿಳೆಯ ಪತಿಗೆ ಜೀವ ಭಯ ಒಡ್ಡಿದ್ದಾರೆಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಬಿ.ಎಂ ಹೂಗಾರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಜಾಮೀನಿನಲ್ಲಿ ಬಿಡುಗೊಂಡಿದ್ದ ಹಿತೇಶ್ ಮತ್ತು ಗಿರೀಶ್‍ರವರು ಬಳಿಕ ನ್ಯಾಯಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದ ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ 2004ರ ಸೆಪ್ಟೆಂಬರ್ 7ರಂದು ಶಾಸಕಿ ಶಕುಂತಲಾ ಟಿ.ಶೆಟ್ಟಿ ಯವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಮಹಿಳೆಚಿiÀುರ ಬೃಹತ್ ಪ್ರತಿಭಟನೆ ನಡೆದಿತ್ತು. ಉಪ್ಪಿನಂಗಡಿ ಪೊಲೀಸರು ಹಿತೇಶ್‍ರವರು ಬೆಂಗಳೂರಲ್ಲಿ ಬೇರೊಂದು ಹೆಸರಲ್ಲಿ ವಾಸ್ತವ್ಯವಿರುವುದನ್ನು ತಿಳಿದು, 2018ರ ಮಾರ್ಚ್ 22ರಂದು ಆತನನ್ನು ಬಂಧಿಸಿದ್ದಾರೆ.
ಬಂಧಿತ ಹಿತೇಶ್‍ರವರು ಜಾಮೀನಿನಲ್ಲಿ ಬಿಗುಗಡೆಗೊಂಡಿದ್ದರು. ಇದೀಗ ವಿಚಾರಣೆಯನ್ನು ಪೂರ್ಣಗೊಳಸಿದ ಮಂಗಳೂರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಹಿತೇಶ್ ಗೌಡರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಹಿತೇಶ್ ಗೌಡರವರ ಪರ ವಕೀಲರಾದ ಮಹೇಶ್ ಕಜೆ ಮತ್ತುಮಹೇಶ್ ಜೋಗಿ ವಾದಿಸಿದ್ದರು.