ವಿಟ್ಲದ ದನಗಳ್ಳ ಖಧೀಮ ಒಕ್ಕೆತ್ತೂರು ಇಕ್ಕು ಮತ್ತು ಉಸೈನ್ ಬಂಧನ : ವಿಟ್ಲ ಯಸ್.ಐ.ಯಲ್ಲಪ್ಪ ನೇತ್ರತ್ವದಲ್ಲಿ ಕಾರ್ಯಚರಣೆ-ಕಹಳೆ ನ್ಯೂಸ್
ವಿಟ್ಲ: ಕೇರಳ ರಾಜ್ಯಕ್ಕೆ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ವಿಟ್ಲ ಪೋಲೀಸರು ಬಂಧಿಸಿದ್ದಾರೆ. ಅ.14 ರಂದು ಸೋಮವಾರ ಕೊಡಪದವು ಎಂಬಲ್ಲಿ ಗೋವುಗಳನ್ನು ತುಂಬಿಕೊಂಡು ಕೇರಳಕ್ಕೆ ಸಾಗಿಸಬೇಕಿದ್ದ ಗೂಡ್ಸ ವಾಹನ ಪೊಲೀಸರ ಸಮಯಪ್ರಜ್ನೆ ಮತ್ತು ಮುತುವರ್ಜಿಯಿಂದ ಸಿಕ್ಕಿಬಿದ್ದು ವಿಟ್ಲಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಈ ಸಮಯದಲ್ಲಿ ವಾಹನ ಚಾಲಕ ಉಸೈನ್ ಪರಾರಿಯಾಗಿದ್ದು ವಾಹನಕ್ಕೆ ಬೆಂಗಾವಲಾಗಿ ಚಾಲಕನಿಗೆ ಮಾಹಿತಿ ನೀಡುತ್ತಿದ್ದ ಪ್ರಮುಖ ಗೋ ಕಳ್ಳ ಇಕ್ಕು ಎಂಬುವನು ತನ್ನ ಮೊಟರ್ ಸೈಕಲ್‍ನಲ್ಲಿ ಹೊಗುತ್ತಿದ್ದರೂ ಸಹ ಪೋಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ.ಪೋಲೀಸರು ವಾಹನವನ್ನು ಹಿಡಿದು ಗೋ ರಕ್ಷಣೆ ಮಾಡುವಲ್ಲಿ ಸಫಲರಾಗಿದ್ದರು.
ಕೆಲವು ಮೂರು ತಿಂಗಳ ಹಿಂದೆ ಇದೇ ಐಸ್ ಕ್ರೀಂ ವಾಹನದಲ್ಲಿ ಅಕ್ರಮವಾಗಿ ಗೋಕಳ್ಳತನ ಮಾಡಿ ಕೇರಳಕ್ಕೆ ಸಾಗಿಸುತ್ತಿದ್ದ ವೇಳೆ ವಾಹನ ಸಹಿತ ಆರೋಪಿ ಉಸ್ಮಾನ್ ಅವನನ್ನು ವಿಟ್ಲ ಎಸ್ ಐ ಯಲ್ಲಪ್ಪ ರವರ ತಂಡ ಬೆನ್ನಟ್ಟಿ ಹಿಡಿದು ಪ್ರಕರಣ ದಾಖಲಿಸಿದ್ದರು.
ಬಳಿಕ ವಾಹನ ಇಕ್ಕು ಎಂಬ ಗೋಕಳ್ಳನಿಗೆ ವಾಹನ ಮಾರಾಟ ಮಾಡಲಾಗಿತ್ತು. ಇಕ್ಕು ಈ ವಾಹನದ ಬಣ್ಣವನ್ನು ಬದಲಾಯಿಸಿ ಅಕ್ರಮವಾಗಿ ಗೋಗಳನ್ನು ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ.ಈ ಬಗ್ಗೆ ಖಚಿತವಾದ ಮಾಹಿತಿಯನ್ನು ಸಂಗ್ರಹಿಸಿದ ವಿಟ್ಲ ಪೋಲಿಸರು ಆರೋಪಿಗಳ ಮತ್ತು ವಾಹನದ ಮೇಲೆ ಕಣ್ಣಿಟ್ಟಿದ್ದರು.
ಸೋಮವಾರ ಕಾರ್ಯಚರಣೆ ನಡೆಸಿದಾಗ ವಾಹನ ಬಿಟ್ಟು ಪರಾರಿಯಾಗಿದ್ದ ಆರೋಪಿ ಇಕ್ಕು ಮತ್ತು ಬೊಳಂತೂರು ಉನೈಸ್ ನನ್ನು ನಿನ್ನೆ ರಾತ್ರಿ ಒಕ್ಕೆತ್ತೂರಿನಲ್ಲಿ ಬಂಧಿಸಿದ್ದಾರೆ. ಕಾರ್ಯಚರಣೆಯಲ್ಲಿ ವಿಟ್ಲ ಎಸ್.ಐ.ಯಲ್ಲಪ್ಪ ಜಯಕುಮಾರ್, ಅನುಕುಮಾರ್, ಲೋಕೇಶ್, ಪ್ರತಾಪ್ ಭಾಗವಹಸಿದ್ದರ