Monday, November 25, 2024
ಸುದ್ದಿ

ಸ್ಪೇಸ್‍ಎಕ್ಸ್ ಅಭಿವೃದ್ಧಿ ಪಡಿಸುತ್ತಿರುವ ಮರು ಬಳಕೆ ಮಾಡಬಲ್ಲ ಉಡಾವಣ ವಾಹಕ –ಕಹಳೆ ನ್ಯೂಸ್

Space shuttle taking off on a mission

ಹೊಸದಿಲ್ಲಿ: ವಿದೇಶದ ಬಾಹ್ಯಾಕಾಶ ಸಂಶೋಧನ ಸಂಸ್ಥೆಗಳಾದ ನಾಸಾ ಮತ್ತು ಸ್ಪೇಸ್‍ಎಕ್ಸ್ ಅಭಿವೃದ್ಧಿ ಪಡಿಸುತ್ತಿರುವ ಮರು ಬಳಕೆ ಮಾಡಬಲ್ಲ ಉಡಾವಣ ವಾಹಕಗಳನ್ನು ಇಸ್ರೋ ಕೂಡ ಕೆಲವು ವರ್ಷಗಳಿಂದ ಅಭಿವೃದ್ಧಿ ಪಡಿಸುತ್ತಿದ್ದು, ಈಗ ಮಹತ್ವದ ಪ್ರಯೋಗಕ್ಕೆ ಮುಂದಾಗಿದೆ. ವಿಶೇಷವೆಂದರೆ ಈ ಪ್ರಯೋಗಕ್ಕೆ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಸೈನ್ಸ್ ಸಿಟಿಯೇ ಕೇಂದ್ರಬಿಂದುವಾಗಲಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮರುಬಳಕೆ ಮಾಡಬಹುದಾದ ಸ್ಪೇಸ್ ಶಟಲ್‍ಗಳ ಅಭಿವೃದ್ಧಿ ಪ್ರಕ್ರಿಯೆಯನ್ನು 2016ರಿಂದಲೂ ಇಸ್ರೋ ನಡೆಸುತ್ತಿದೆ. ಈ ಬಾಹ್ಯಾಕಾಶ ನೌಕೆಗಳು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿ ವಾಪಸ್ ಭೂಮಿಗೆ ಬಂದು ತಲುಪುತ್ತವೆ. ಅನಂತರ ಇದೇ ವಾಹಕಗಳನ್ನು ಬಳಸಿ ಇನ್ನೊಂದು ಉಪಗ್ರಹವನ್ನು ಕಕ್ಷೆಗೆ ಕಳುಹಿಸಬಹುದು. ಇದರಿಂದ ಉಡಾವಣೆ ವೆಚ್ಚ ಗಮನಾರ್ಹವಾಗಿ ಇಳಿಕೆಯಾಗುತ್ತದೆ.

ಈ ಬಾರಿ ಪ್ರಾಯೋಗಿಕವಾಗಿ ಭೂಮಿಯ ಮೇಲೆಯೇ ಸ್ಪೇಸ್ ಶಟಲ್ ಇಳಿಸುವ ಪ್ರಯೋಗ ಮಾಡಲಿದೆ. ಚಳ್ಳಕೆರೆಯಲ್ಲಿ ಸುಮಾರು 2.2 ಕಿ.ಮೀ. ಉದ್ದದ ರನ್‍ವೇ ನಿರ್ಮಿಸಲಾಗಿದೆ. ಈ ರನ್‍ವೇ ಮೇಲೆ 3 ಕಿ.ಮೀ. ಎತ್ತರದಿಂದ ಹೆಲಿಕಾಪ್ಟರ್ ಬಳಸಿ ಸ್ಪೇಸ್ ಶಟಲ್ ಅನ್ನು ಕೆಳಕ್ಕೆ ಎಸೆಯ ಲಾಗುತ್ತದೆ. ಸ್ವಲ್ಪ ಹೊತ್ತು ಹಾರಾಡಿದ ಬಳಿಕ ಇದು ವಿಮಾನದ ರೀತಿಯಲ್ಲೇ ರನ್‍ವೇಯಲ್ಲಿ ಇಳಿಯಲಿದೆ. ಇದರಲ್ಲಿನ ಕಂಪ್ಯೂಟರ್‍ಗಳೇ ಶಟಲ್ ಅನ್ನು ಸಂಪೂರ್ಣ ನಿಯಂತ್ರಣ ಮಾಡಲಿವೆ. ಯಾವಾಗ ಈ ಸ್ಪೇಸ್ ಶಟಲ್ ಪ್ರಯೋಗ ನಡೆಸಲಾಗುತ್ತದೆ ಎಂಬುದರ ಬಗ್ಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.