ಪುತ್ತೂರು : ತಾಯಿ ಉಳ್ಳಾಲ್ತಿಯ ನೆಲ ಪುತ್ತೂರಿನ ಬಲ್ನಾಡಿನಲ್ಲಿ ವಿನಾಯಕ ಫ್ರೇಂಡ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಅಮೆಚೂರ್ ಸಂಯುಕ್ತ ಆಶ್ರಯದಲ್ಲಿ ಫ್ರೋ ಕಬಡ್ಡಿ ಮಾದರಿಯ ‘ ವಿನಾಯಕ ಟ್ರೋಫಿ – 2018 ‘ ಕಬಡ್ಡಿ ಪಂದ್ಯಾಟವು ಆದಿತ್ಯವಾರ 28 ಫೆಬ್ರವರಿಯಂದು ಬೆಳಗ್ಗೆ 9.00 ಗಂಟೆಗೆ ಉದ್ಘಾಟಿಸಲ್ಪಡಲಿದೆ.
ಬಲ್ನಾಡಿನ ವಿನಾಯಕ ಕ್ರೀಡಾಂಗಣದಲ್ಲಿ ಪಂದ್ಯಾಟವು ನಡೆಯಲಿದ್ದು ಚನಿಲ ತಿಮ್ಮಪ್ಪ ಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ ಪಂದ್ಯಾಟ ನಡೆಯಲಿದೆ. ಪಂದ್ಯಾಟವನ್ನು ಸದಾಶಿವ ನೆಲ್ಲಿತ್ತಾಯರು ಉದ್ಘಾಟಿಸಲಿದ್ದಾರೆ.
ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆ ವಿವಿಧ ಗಣ್ಯರು ಭಾವಹಿಸಲಿದ್ದಾರೆ. ಸಂಜೆಯ ಸಭಾ ಕಾರ್ಯಕ್ರಮವು ಯುವ ಮುಂದಾಳು ಅಶೋಕ್ ಕುಮಾರ್ ರೈಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಮೀನಾಕ್ಷಿ ಶಾಂತಿಗೋಡು, ಮುರಳಿಕೃಷ್ಣ ಹಸಂತ್ತಡ್ಕ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ವರದಿ : ಕಹಳೆ ನ್ಯೂಸ್