Sunday, November 24, 2024
ರಾಜಕೀಯ

ಬಂಟ್ವಾಳದ ನವ ನಿರ್ಮಾಣದ ಕನಸು ಹೊತ್ತ ಕಾಯಕಯೋಗಿಯ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್

ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಂಟ್ವಾಳ ಶಾಸಕರು ಬಂಟ್ವಾಳದ ಜನಸಾಮಾನ್ಯರ ಪಾಲಿನ ಪ್ರೀತಿಯ ರಾಜೇಶಣ್ಣನ, ಮಹತ್ವಾಕಾಂಕ್ಷೆಯ ಬಿ ಸಿರೋಡ್ ನಗರದ ಸುಂದರೀಕರಣದ ಕಾಯಕಲ್ಪಕ್ಕೆ ಮೂಹೂರ್ತ ಸಿದ್ದವಾಗಿದೆ.

ಬಂಟ್ವಾಳ ತಾಲೂಕಿನ ಹೃದಯ ಭಾಗ ಬಿ.ಸಿರೋಡ್ ವಿಸ್ತಾರವಾದ ಅರ್ಥದಲ್ಲಿ, ಬಂಟ್ವಾಳ ಕ್ರಾಸ್ ರೋಡ್ ಕಳೆದ ಅನೇಕ ದಶಕಗಳಿಂದ, ಇಕ್ಕಟ್ಟಾದ ವ್ಯವಸ್ಥೆಗಳು ವಾಹನ ದಟ್ಟಣೆ ಕಳೆಗುಂದಿದ ವಿಭಾಜಕಗಳು ನಗರದ ಪ್ರಮುಖ ಬಾಗವಾದರು, ಕಳೆಗುಂದಿದ ಮೆಲ್ಸೆತುವೆಯ ಕೆಳಬಾಗದಲ್ಲಿ ದಾರಿದೀಪಕ್ಕೆ ಅಧುನಿಕತೆಯ ಸ್ಪರ್ಶವಿಲ್ಲ, ಸುರಕ್ಷತೆಗೆ ಸಿ ಸಿ ಟಿ ವಿ ಇಲ್ಲ, ಯೋಜನಾಬದ್ಧ ವಾಹನ ನಿಲುಗಡೆಯ ಯೋಜನೆಗಳಿಲ್ಲ, ದಟ್ಟಣೆಯ ರಸ್ತೆಗಳು ತಾಲೂಕಿನ ಹೃದಯಬಾಗದ ಜನಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡಿತು, ಶಾಸಕನಾದರೆ ಬಿಸಿರೋಡಿನ ನಗರದ ಸುಂದರೀಕರಣಕ್ಕೆ ಅದ್ಯತೆ ನೀಡುತ್ತೆನೆಂದು ಚುನಾವಣೆಯ ಪೂರ್ವದಲ್ಲಿ ಘೋಷಿಸಿದ ಮಾತುಗಳು, ಬರೀ ಮಾತುಗಳಾಗದೇ ಕೃತಿರೂಪಕ್ಕಿಳಿಯುವ ಸಮಯ ಬಂದಿದೆ, ಇದೇ 21 ನೇ ತಾರೀಖು ಬೆಳಗ್ಗೆ 10 ಘಂಟೆಗೆ ಬಿಸಿರೋಡಿನ ಮೆಲ್ಸೆತುವೆಯ ಕೆಳಭಾಗದಲ್ಲಿ, ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಅರ್ ಅಶೋಕ್‍ರವರ ಘನ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳೀನ್ ಕುಮಾರ್ ಕಟೀಲ್‍ರವರ ಉಪಸ್ಥಿತಿಯೊಂದಿಗೆ, ನಮ್ಮ ಹೆಮ್ಮೆಯ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿರವರ ನೇತೃತ್ವದಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ ಬಿಸಿ ರೋಡ್ ಸುಂದರೀಕರಣದ ಕಾಯಕಲ್ಪಕ್ಕೆ ಶಂಕುಸ್ಥಾಪನೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು