Recent Posts

Monday, January 20, 2025
ಕ್ರೀಡೆ

ಇಂದು ಪ್ರೊ ಕಬಡ್ಡಿ ಲೀಗ್ ಪೈನಲ್ ಸೆಣಸಾಟ- ಕಹಳೆ ನ್ಯೂಸ್

ಅಹ್ಮದಾಬಾದ್: ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಫೈನಲ್ ಪಂದ್ಯ ಶನಿವಾರ ಇಲ್ಲಿ ನಡೆಯಲಿದ್ದು, ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಿರುವ ದಿಲ್ಲಿ ದಬಾಂಗ್ ತಂಡ ಬಂಗಾಳ ವಾರಿಯರ್ಸ್ ತಂಡವನ್ನು ಎದುರಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫೈನಲ್ ಕಣದಲ್ಲಿರುವ ಉಭಯ ತಂಡಗಳು ಮೊದಲ ಬಾರಿ ಫೈನಲ್‌ನಲ್ಲಿ ಸೆಣಸಾಡುತ್ತಿರುವುದರಿಂದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಈ ಬಾರಿ ಹೊಸ ಚಾಂಪಿಯನ್ ತಂಡದ ಉದಯವಾಗುವುದು ನಿಶ್ಚಿತ.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡೂ ತಂಡಗಳ ಕೋಚ್‌ಗಳು ತಮ್ಮ ತಂಡದ ಈ ವರೆಗಿನ ಪ್ರದರ್ಶನದಿಂದ ಸಂತುಷ್ಟರಾಗಿದ್ದು, ಯಾರು ಟ್ರೋಫಿ ಗೆಲ್ಲುತ್ತಾರೆ ಎನ್ನುವುದಕ್ಕಿಂತಲೂ ಈ ಪಂದ್ಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ ಎಂದು ಅಭಿಪ್ರಾಯಪಟ್ಟಿದ್ದಾರೆ.

”ಎರಡೂ ತಂಡಗಳು ಉತ್ತಮವಾಗಿರುವ ಕಾರಣ ಯಾವ ತಂಡ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆಲ್ಲುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ನಮ್ಮ ಆಟಗಾರರು ತಮಗೆ ಸಾಧ್ಯವಿರುವಷ್ಟು ಚೆನ್ನಾಗಿ ಆಡಲಿದ್ದಾರೆ” ಎಂದು ದಬಾಂಗ್ ದಿಲ್ಲಿ ತಂಡದ ಕೋಚ್ ಕೃಷ್ಣ ಕುಮಾರ್ ಹೂಡಾ ಹೇಳಿದ್ದಾರೆ.

ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಕೆಲವು ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ನೆರವಾಗಲಿದೆ ಎಂದು ಹೂಡಾ ವಿಶ್ವಾಸ ವ್ಯಕ್ತಪಡಿಸಿದರು.

ಗಮನಾರ್ಹ ವಿಚಾರವೆಂದರೆ ಹೂಡಾ ಭಾರತೀಯ ಕಬಡ್ಡಿ ತಂಡದ ಕೋಚ್ ಆಗಿದ್ದ ಅವಧಿಯಲ್ಲಿ ಬಂಗಾಳ ವಾರಿಯರ್ಸ್‌ನ ಹಾಲಿ ಕೋಚ್ ಬಿ.ಸಿ. ರಮೇಶ್ ರಾಷ್ಟ್ರೀಯ ಆಟಗಾರನಾಗಿದ್ದರು.

”ನಾಳೆಯ ಪಂದ್ಯದಲ್ಲಿ ರೈಡರ್‌ಗಳು ಹಾಗೂ ಡಿಫೆಂಡರ್‌ಗಳು ಶ್ರೇಷ್ಠ ಪ್ರದರ್ಶನ ನೀಡುವ ಅಗತ್ಯವಿದೆ. ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಮುಖ್ಯ ಪಾತ್ರವಹಿಸಲಿದೆ. ಎರಡು ಹೊಸ ತಂಡಗಳು ಫೈನಲ್‌ನಲ್ಲಿ ಆಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನಿಜವಾದ ಕಬಡ್ಡಿಯನ್ನು ಹೇಗೆ ಆಡಬಹುದೆನ್ನುವುದನ್ನು ನಾವು ವಿಶ್ವಕ್ಕೆ ತೋರಿಸಲಿದ್ದೇವೆ” ಎಂದು ಬಂಗಾಳ ತಂಡದ ಕೋಚ್ ರಮೇಶ್ ಹೇಳಿದ್ದಾರೆ. ದಬಾಂಗ್ ದಿಲ್ಲಿ ಕೆಸಿ ತಂಡ ಮೊದಲ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವನ್ನು 44-38 ಅಂಕಗಳ ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿತ್ತು. ಅತ್ಯಂತ ಪೈಪೋಟಿಯಿಂದ ಕೂಡಿದ್ದ ಎರಡನೇ ಸೆಮಿ ಫೈನಲ್‌ನಲ್ಲಿ ಬಂಗಾಳ ವಾರಿಯರ್ಸ್ ತಂಡ ಯು ಮುಂಬಾ ತಂಡವನ್ನು 37-35 ಅಂಕಗಳ ಅಂತರದಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತ್ತು. ಈ ಎರಡು ತಂಡಗಳು ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಮೊದಲೆರಡು ಸ್ಥಾನವನ್ನು ಪಡೆದಿದ್ದವು. ದಿಲ್ಲಿ 22 ಪಂದ್ಯಗಳಲ್ಲಿ 15ರಲ್ಲಿ ಜಯ ಸಾಧಿಸಿ ಮೊದಲ ಸ್ಥಾನದಲ್ಲಿದ್ದರೆ, ಬಂಗಾಳ 22ರಲ್ಲಿ 14ರಲ್ಲಿ ಗೆಲುವು ದಾಖಲಿಸಿ 2ನೇ ಸ್ಥಾನ ಪಡೆದಿತ್ತು.

ಟೂರ್ನಿಯ ಫಲಿತಾಂಶಗಳು

ಮೂರು ತಂಡಗಳಾದ ಜೈಪುರ ಪಿಂಕ್ ಪ್ಯಾಂಥರ್ಸ್, ಯು ಮುಂಬಾ ಹಾಗೂ ಬೆಂಗಳೂರು ಬುಲ್ಸ್ ತಲಾ ಒಂದು ಬಾರಿ ಟೂರ್ನಿಯಲ್ಲಿ ಜಯ ಸಾಧಿಸಿವೆ. ಪಾಟ್ನಾ ಪೈರೇಟ್ಸ್ ಮೂರು ಬಾರಿ ಪ್ರಶಸ್ತಿ ಜಯಿಸಿ ಟೂರ್ನಿಯ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಪಾಟ್ನಾ ಎರಡು ಬಾರಿ ಪ್ರಶಸ್ತಿ ಉಳಿಸಿಕೊಂಡ ಏಕೈಕ ತಂಡ. ಬೆಂಗಳೂರು ಬುಲ್ಸ್ ಹಾಲಿ ಚಾಂಪಿಯನ್ ಆಗಿದ್ದು, ಈ ಬಾರಿ ದಿಲ್ಲಿ ಹಾಗೂ ಬಂಗಾಳ ತಂಡಗಳ ಪೈಕಿ ಯಾವುದು ಮಿರುಗುವ ಟ್ರೋಫಿ ಜಯಿಸಲಿದೆ ಎಂದು ಶನಿವಾರ ರಾತ್ರಿ 8ರ ಬಳಿಕ ತಿಳಿಯಲಿದೆ.