Monday, January 20, 2025
ಸುದ್ದಿ

ನಕಲಿ ನೋಟು ಜಾಲ ಭೇದಿಸಿದ ಸಕಲೇಶಪುರ ಪೊಲೀಸರು ಕಡಬ ನಿವಾಸಿ ಸೇರಿದಂತೆ ನಾಲ್ವರ ಬಂಧನ – ಕಹಳೆ ನ್ಯೂಸ್

ಸಕಲೇಶಪುರ: ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ತಂಡವೊಂದನ್ನು ಸಕಲೇಶಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

  

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಇಲ್ಯಾಸ್, ಸುಲೈಮಾನ್, ಕೆ.ಆರ್. ನಗರ ತಾಲೂಕು ಬೆಟ್ಟಗಾನಹಳ್ಳಿ ನಿವಾಸಿ ಕಿರಣ್ ಹಾಗೂ ಹನುಮನಹಳ್ಳಿ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮಾರುತಿ ಓಮ್ನಿ ಕಾರಿನಲ್ಲಿ ಸಕಲೇಶಪುರದಿಂದ ಮಂಗಳೂರಿಗೆ ತೆರಳುವ ವೇಳೆ ಮಾರನಹಳ್ಳಿ ಬಳಿ ಪೊಲೀಸರು ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದಾಗ ವಾಹನದ ದಾಖಲೆ ನೀಡಲು ಹಿಂದೇಟು ಹಾಕಿ ವಾಹನ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಾಹನ ತಪಾಸಣೆ ನಡೆಸಿ 2000, 500 ಹಾಗೂ 100 ಮುಖ ಬೆಲೆಯ ಒಟ್ಟು 13 ಸಾವಿರ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದು ತನಿಖೆಯನ್ನು ಪ್ರಾರಂಭಿಸಿದ್ದಾರೆ.