Tuesday, January 21, 2025
ಸುದ್ದಿ

ಪುತ್ತೂರು ನೆಹರು ನಗರದಲ್ಲಿ ತಲೆ ಎತ್ತಿ ನಿಂತ ೮ ಅಡಿಯ ಆರಾಧ್ಯ ಮೂರ್ತಿ ವಿರಾಂಜನೇಯ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ನೆಹರು ನಗರದ ವಿವೇಕಾನಂದ ಕಾಲೇಜು ಬಳಿಯಲ್ಲಿ ಆರಾಧ್ಯ ಮೂರ್ತಿ ವಿರಾಂಜನೇಯನ ೮ ಅಡಿಯ ವಿಗ್ರಹ ತಲೆ ಎತ್ತಿ ನಿಂತಿದ್ದು, ನೋಡುಗರ ಕಣ್ಣಿನಲ್ಲಿ ಭಕ್ತಿಭಾವ ಮೂಡಿಸುತ್ತದೆ. ಮಾರ್ಚ್ ೧೪ ರಂದು ಬ್ರಹ್ಮಶ್ರೀ ನಾಗೇಶ ತಂತ್ರಿಗಳು ಪ್ರತಿಷ್ಠಾಪನೆ ಮಾಡಿದ್ದು ವಿರಾಂಜನೇಯನ ಏಕಶಿಲಾ ಮೂರ್ತಿ ಧಾರ್ಮಿಕತೆಗೆ ಮಾತ್ರವಲ್ಲದೆ ಸಂಸ್ಕಾರ, ಸಂಸ್ಕೃತಿ ಉಳಿಸುವ ಪುಣ್ಯ ಭೂಮಿಯಾಗಿ ನೆಲೆಗೊಳ್ಳಲಿದೆ.


ಇಲ್ಲಿ ಪ್ರತಿ ಸಂಕ್ರಮಣದಂದು ಪೂಜಾ ಕೈಂಕರ್ಯ ಹಾಗೂ ಪ್ರತಿ ಶನಿವಾರ ಸತ್ಸಂಗದಂತಹ ಕಾರ್ಯಕ್ರಮಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ೧ ಎಕರೆ ವಿಸ್ತಾರ ಜಾಗದಲ್ಲಿ ಸಂಪೂರ್ಣ ಅಭೀವೃದ್ಧಿ ಮಾಡುವ ಮೂಲಕ ಮಾದರಿ ಕ್ಷೇತ್ರ ಮಹತ್ವದ ಆಕಾಂಕ್ಷೆ ಇಟ್ಟುಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಧಾರ್ಮಿಕತೆ ಹಾಗೂ ಧಾರ್ಮಿಕ ಜ್ಞಾನ ನೀಡುವ ಪುಣ್ಯ ಕ್ಷೇತ್ರವನ್ನಾಗಿ ಮಾಡಲು ವಿ.ಹಿಂ.ಪ ಹಾಗೂ ಭಜರಂಗದಳದ ಕಾರ್ಯಕರ್ತರು ಪಣ ತೊಟ್ಟಿದ್ದಾರೆ. ಹಗಲು ರಾತ್ರಿಯ ಪರಿಶ್ರಮದ ಫಲವಾಗಿ ಈ ಕ್ಷೇತ್ರದಲ್ಲಿ ಸುಂದರ ಕಟ್ಟಡ ನಿರ್ಮಾಣ ಹಂತದವರೆಗೆ ತಲುಪಿದೆ. ಶ್ರೀ ಆಂಜನೇಯನ ಶಕ್ತಿಯ ಫಲ ಹಾಗೂ ಊರು ಸುಭಿಕ್ಷೆಯ ಉದ್ದೇಶವಿರುವ ಈ ಪುಣ್ಯ ಕಾರ್ಯದಲಿ,್ಲ ಧ್ಯಾನ ಮಂದಿರ ಹಾಗೂ ಉದ್ಯಾವನ ನಿರ್ಮಾಣಕ್ಕೆ ಊರ ಪರ ಊರಿನ ಸಮಸ್ತರು ಒಗ್ಗೂಡಿವಿಕೆಯ ಸಹಕಾರ ಅಗತ್ಯವಿದೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪುತ್ತೂರು ಪ್ರಖಂಡದ ಹಿರಿಯರ ಸಂಕಲ್ಪ ಮ್ತತು ಮುರಳಿ ಕೃಷ್ಣ ಹಸಂತಡ್ಕ, ಜನಾರ್ದನ ಬ್ಟೆಟ್ಟ ಹಾಗೂ ಪಿಜಿ ಜಗನ್ನಿವಾಸ ರಾವ್‌ರವರ ಮಾರ್ಗದರ್ಶನದ ಮೂಲಕ ವಿರಾಂಜನೇಯನ ಏಕಶಿಲಾ ಮೂರ್ತಿ ನಿರ್ಮಾಣದ ಕಾರ್ಯದಲ್ಲಿದೆ. ಇನ್ನು ಶ್ರೀಧರ್ ತೆಂಕಿಲ, ಜಯಂತ್ ಕುಂಜೂರ್ ಪಂಜ ಹಾಗೂ ಪ್ರವೀಣ್ ಕಲ್ಲೆಗೆ ಅವರ ನೇತೃತ್ವದಲ್ಲಿ ವಿ.ಹಿಂ.ಪ ಹಾಗೂ ಭಜರಂಗದಳದ ಕಾರ್ಯಕರ್ತರ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಶ್ರೀ ವಿರಾಂಜನೇಯನ ಏಕಶಿಲಾ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ಕೆ ನೆರವಿನ ಹಸ್ತ ನೀಡುವ ದಾನಿಗಳು ಈ ಕೆಳಗಂಡ ಖಾತೆಗೆ ಹಣ ಜಮಾ ಮಾಡಬಹುದಾಗಿದೆ.

NAME – VISHWA HINDU PARISHATH PUTTUR
ACCOUNT NUMBER – 60 42 50 01 03 58 60 01
IFSC CODE – KARB 00 00 604
CONTACT – 94 48 32 82 89
97 42 56 69 47
97 40 46 24 29
91 64 08 70 12