Tuesday, January 21, 2025
ಸುದ್ದಿ

ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಡಾ. ರೋಹಿಣಾಕ್ಷ ಶಿರ್ಲಾಲು ನೇಮಕ-ಕಹಳೆ ನ್ಯೂಸ್

ಪುತ್ತೂರು: ರಾಜ್ಯ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ರೋಹಿಣಾಕ್ಷ ಶಿರ್ಲಾಲು ನೇಮಕಗೊಂಡಿದ್ದಾರೆ. ಡಾ. ರೋಹಿಣಾಕ್ಷ ಶಿರ್ಲಾಲು ಅವರು ವಿಜಯಕರ್ನಾಟಕ ಪತ್ರಿಕೆ ಅಂಕಣಕಾರರಾಗಿದ್ದು, ಈಗಾಗಲೇ ಅವರು ಮೂರುಕನ್ನಡ ಕೃತಿಗಳನ್ನು ಪ್ರಕಟಪಡಿಸಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಅವರ ನೂರಕ್ಕಿಂತ ಅಧಿಕ ಲೇಖನಗಳು ವಿವಿಧ ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದು, ಎಬಿವಿಪಿಯ ರಾಜ್ಯ ಉಪಾಧ್ಯಕ್ಷರೂ, ವಿದ್ಯಾರ್ಥಿಪಥ ಮಾಸಿಕ ಪತ್ರಿಕೆಯ ಸಂಪಾದಕರು ಆಗಿದ್ದಾರೆ. ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಬುಕ್ ಟ್ರಸ್ಟಿನ ಕನ್ನಡ ಭಾಷೆಯ ಎಂ.ಎ. ಸಮಿತಿಯ ಸದಸ್ಯರೂ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿಯನ್ನೂ ಪಡೆದಿದ್ದಾರೆ. ಮೂಲತಃ ಇವರು ಬೆಳ್ತಂಗಡಿ ನಿವಾಸಿಯಾಗಿದ್ದು ತಂದೆ ಶಿವಪ್ಪ, ತಾಯಿ ರುಕ್ಮಿಣಿ. ಪತ್ನಿ ತುಳಸಿಯವರು ಪುತ್ತೂರು ವಿವೇಕಾನಂದ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಮಗಳು ಖುಷಿ ಅನರ್ಘ್ಯ ಹಾಗೂ ೫ ದಿನಗಳ ಹಿಂದೆ ಜನಿಸಿದ ಗಂಡು ಮಗುವಿನೊಂದಿಗೆ ಪ್ರಸ್ತುತ ಪುತ್ತೂರಿನ ಕೊಡಿಪ್ಪಾಡಿಯಲ್ಲಿ ವಾಸವಾಗಿದ್ದಾರೆ.