Wednesday, January 22, 2025
ಸುದ್ದಿ

ಜಾಲ್ಸೂರು : ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕದಿಕಡ್ಕ “ಸಂತಸದಾಯಕ ಕಲಿಕೆ -ಮಾಹಿತಿ ಕಾರ್ಯಕ್ರಮ’ – ಕಹಳೆ ನ್ಯೂಸ್

ಕದಿಕಡ್ಕ : ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ, ಪೆರುವಾಜೆ ಇದರ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಮತ್ತು ಗ್ರಾಮ ಪಂಚಾಯತ್ ಜಾಲ್ಸೂರು ಇವುಗಳ ಸಹಯೋಗದಲ್ಲಿ “ಸಂತಸದಾಯಕ ಕಲಿಕೆ ಮಾಹಿತಿ ಕಾರ್ಯಕ್ರಮ “ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕದಿಕಡ್ಕ- ಜಾಲ್ಸೂರು ಇಲ್ಲಿ ನಡೆಯಿತು..
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಸುಪ್ರಿಯಾ.ಪಿ.ಆರ್ ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಕಲಿಕೆಯನ್ನು ಸಂತಸದಾಯಕವಾಗಿ ಕಲಿಯುವುದು ಈಗಿನ ಮಕ್ಕಳಿಗೆ ಅತೀ ಮುಖ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಾಲ್ಸೂರು ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಶ್ರೀ. ಹೂವಪ್ಪ ಗೌಡ ಬಿ. ಮಾತನಾಡಿ ಇಂತಹ ಕಾರ್ಯಕ್ರಮದಿಂದ ಮಕ್ಕಳ ಬೌದ್ಧಿಕ ಮಟ್ಟ ಉತ್ತಮಗೊಳ್ಳುವುದರ ಜೊತೆಗೆ ಮಕ್ಕಳನ್ನು ಶಾಲೆಯ ಕಡೆಗೆ ಹೆಚ್ಚು ಆಕರ್ಷಿತರನ್ನಾಗಿ ಮಾಡುತ್ತದೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಶ್ರೀ ಲಿಂಗಪ್ಪ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಸುಳ್ಯ .ಮಾತನಾಡಿ ಕಲಿಕೆ ಎಂಬುವುದು ಹೊಸ ವಿಷಯವನ್ನು ತಿಳಿದುಕೊಳ್ಳುವ ಪ್ರಕ್ರಿಯೆಯಾಗಿದೆ, ಹೆಜ್ಜೆ ಹೆಜ್ಜೆಗೂ ಹೊಸ ವಿಚಾರ ಕಲಿಯ ಬಹುದು, ಕಲಿಕೆಗೆ ಮನಸ್ಸು ಬೇಕು ಹಾಗೂ ಕಲಿಕೆಗೆ ಪೂರಕವಾದ ವಾತಾವರಣ ಇರಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆಯಲ್ಲಿ ಕಲಿಯುವಂತದ್ದು ನಿತ್ಯ ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಶಾಲೆಯನ್ನು ಸಂತಸದಾಯಕ ಕೇಂದ್ರವನ್ನಾಗಿಸಿದರೆ ಮಕ್ಕಳು ತಾನಾಗಿಯೇ ಶಾಲೆಗೆ ಬರುತ್ತಾರೆ ಎಂದರು. ಗುಂಪು ಚಟುವಟಿಕೆಯ ಮೂಲಕ ಕಲಿಕೆಯನ್ನು ಹೇಗೆ ಸಂತಸದಾಯಕವನ್ನಾಗಿಸಬಹುದು ಎಂದು ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿಯ . ಅಧ್ಯಕ್ಷರಾದ ಶ್ರೀಮತಿ ವಿಜಯ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಾರಿಜ. ಬಿ,ಗ್ರಾಮ ಪಂಚಾಯತ್ ಸಿಬ್ಬಂದಿಯಾದ ಶ್ರೀ ಡಿ. ಚಿದಾನಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಆಯೋಜಕರು, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ರಮೇಶ. ಎ ಸ್ವಾಗತಿಸಿ, ಉಷಾ. ಕೆ ವಂದಿಸಿ, ಪುನಿತಾ. ಎ ಕಾರ್ಯಕ್ರಮ ನಿರೂಪಿಸಿದರು..