Wednesday, January 22, 2025
ಸುದ್ದಿ

ಬೆಳ್ಳಾರೆ ಕಾಲೇಜು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಸರಕಾರಿ ಯೋಜನೆಗಳ ಮಾಹಿತಿ ಕಾರ್ಯಕ್ರಮ’- ಕಹಳೆ ನ್ಯೂಸ್

ಪಂಜ ,ಐವತೊಕ್ಲು : : ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಪೆರುವಾಜೆ ಇದರ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಮತ್ತು ಗ್ರಾಮ ಪಂಚಾಯತ್ ಪಂಜ ಇವುಗಳ ಸಹಯೋಗದಲ್ಲಿ “ಸರಕಾರಿ ಯೋಜನೆಗಳ ಮಾಹಿತಿ ಕಾರ್ಯಕ್ರಮ ” ಮುಂದುವರಿಕಾ ಶಿಕ್ಷಣ ಕೇಂದ್ರ ಜನತಾ ಕಲೋನಿ ಐವತೊಕ್ಲು, ಪಂಜ ಇಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳ್ಯ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಅಬ್ದುಲ್ ಗಫೂರ್ ಇಂದು ಸರಕಾರಿಯೋಜನೆಗಳು ಹಲವಾರಿವೆ , ಆದರೆ ಜನರಲ್ಲಿ ಯೋಜನೆಗಳ ಬಗ್ಗೆ ಮಾಹಿತಿಯ ಕೊರತೆ ಇದೆ, ಆದ್ದರಿಂದ ಜನರಲ್ಲಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿಸುವ ಕೆಲಸ ಆಗಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮವು ಜನರಲ್ಲಿ ತಿಳುವಳಿಕೆಯನ್ನು ಮೂಡಿಸಿ ಜನರು ಹೆಚ್ಚು ಹೆಚ್ಚು ಯೋಜನೆಗಳ ಸದುಪಯೋಗ ಪಡೆಯುವಂತಾಗಲಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕಾಂತರಾಜು. ಸಿ. “ಸರಕಾರಿ ಯೋಜನೆಗಳ ಮುಖ್ಯ ಉದ್ದೇಶವೇ ಬಡತನ ನಿರ್ಮೂಲನೆ ಆದರೆ ಇಂದು ಅದು ಸರಿಯಾದ ಜನರಿಗೆ ಸಿಗದೇ, ಸರಕಾರಿ ಯೋಜನೆಗಳು ಸಂಪೂರ್ಣ ಫಲಪ್ರದವಾಗದ ಸ್ಥಿತಿ ಇದೆ. ಈ ಸ್ಥಿತಿ ಬದಲಾಗಬೇಕಿದೆ ,ಜನರಿಗೆ ಯೋಜನೆಗಳ ಅರಿವು ಮತ್ತು ಅಗತ್ಯತೆಯ ಮಾಹಿತಿ ಒದಗಿಸಬೇಕಿದೆ ಎಂದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾಗಿರುವ ಡಾ. ಮಂಜುನಾಥ್ ಮಾತನಾಡಿ ಆರೋಗ್ಯ ಇಲಾಖೆಯಲ್ಲಿ ಲಭ್ಯಯವಿರುವ ಸರಕಾರಿ ಯೋಜನೆಗಳು ಯಾವುವು ಮತ್ತು ಅವುಗಳನ್ನು ಪಡೆದುಕೊಳ್ಳುವ ವಿಧಾನಗಳ ಬಗ್ಗೆ ತಿಳಿಸಿದರು ಮತ್ತು ಆರೋಗ್ಯ ಇಲಾಖೆಗೆ ಸಂಬಂಧಿಸಿದ, ಪ್ರಮುಖವಾಗಿ ಅಯುಷ್ಮಾನ್ ಯೋಜನೆಯು ಒಂದು ಉತ್ತಮ ಯೋಜನೆಯಾಗಿದ್ದು ಅದರ ಸದುಪಯೋಗ ಪಡೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದರು.

ಇನ್ನೊವ9 ಸಂಪನ್ಮೂಲ ವ್ಯಕ್ತಿಯಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕರು ಮಾತನಾಡಿ ಉದ್ಯೋಗ ಖಾತರಿ ಯೋಜನೆ ಸರಕಾರಿಯೋಜನೆಗಳಲ್ಲಿಯೇ ಒಂದು ಮಹತ್ವದ ಯೋಜನೆ ಆದರೆ ಜನರಲ್ಲಿಯೋಜನೆಯಡಿ ವೇತನ ಕಡಿಮೆ, ಅದು ಕೂಡ ಸರಿಯಾಗಿ ಸಿಗುತ್ತಿಲ್ಲ ಎಂಬ ತಪ್ಪು ಅಭಿಪ್ರಾಯಗಳು ಇವೆ ಆದರೆ ನಾವು ಸರಿಯಾದ ದಾಖಲೆಗಳನ್ನು ನೀಡಿ ಯೋಜನೆಗೆ ಒಳಪಟ್ಟಾಗ ಇಂಥಹ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎಂದರು.

ವಿಶೇಷ ಚೇತನರ ಪುನರ್ವಸತಿ ಕಾರ್ಯಕರ್ತೆ ಶ್ರೀಮತಿ ಮೀನಾಕ್ಷಿ ಮಾತನಾಡಿ ವಿಶೇಷಚೇತನರ ವೇತನ, ವೃದ್ಧಾಪ್ಯ ವೇತನ ಮತ್ತುಸಂಧ್ಯಾಸುರಕ್ಷಾ ಯೋಜಯ ಬಗ್ಗೆ ತಿಳಿಸಿದರು..

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕಾರ್ಯಪ್ಪ ಗೌಡ ಚಿದ್ಗಲ್ ಸರಕಾರಿ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ತಲುಪಿ ಅವರು ಅದರ ಪ್ರಯೋಜನ ಪಡೆದುಕೊಂಡಗ ಮಾತ್ರ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯ. ಇಂದು ಆ ಕೆಲಸವನ್ನು ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಆರಂಭಿಸಿದ್ದಾರೆ, ಈ ಕಾಲೋನಿಯಲ್ಲಿ ಸರಕಾರಿ ಯೋಜನೆಗಳ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡು ಇಲ್ಲಿಯ ಜನರಿಗೆ ಮಾಹಿತಿ ಕೊಡುವ ಕೆಲಸವನ್ನು ಮಾಡಿದ್ದರೆ, ನಿಜಕ್ಕೂ ಇದೊಂದು ಅಥ9ಪೂರ್ಣ ಕಾರ್ಯಕ್ರಮ ಎಂದರು.

ವೇದಿಕೆಯಲ್ಲಿ ಪಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಮಣಿಯಾನ ಪುರುಷೋತ್ತಮ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಜಗದೀಶ್ ಪುರಿಯ, ಮಂಜುಳ ಅತ್ಯಡ್ಕ ಉಪಸ್ಥಿತರಿದ್ದರು..

ಕಾರ್ಯಕ್ರಮದಲ್ಲಿ ಜನತಾ ಕಲೋನಿಯ ಜನರು ಭಾಗವಹಿಸಿ ಮಾಹಿತಿ ಪಡೆದುಕೊಂಡರು..
ಕಾರ್ಯಕ್ರಮ ಆಯೋಜಕರಾದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ ಗಣೇಶ್ ಸ್ವಾಗತಿಸಿ, ವಂದಿಸಿದರು, ಲತಾಕುಮಾರಿ ಕಾರ್ಯಕ್ರಮ ನಿರೂಪಿಸಿದರು..