Thursday, January 23, 2025
ಸುದ್ದಿ

ಇಂದು ಆಕಾಶವಾಣಿಯಲ್ಲಿ ಫಿಲೋಮಿನಾ ವಿದ್ಯಾರ್ಥಿಗಳ ಕಾರ್ಯಕ್ರಮ ಪ್ರಸಾರ-ಕಹಳೆ ನ್ಯೂಸ್

ಪುತ್ತೂರು:ಸಂತ ಫಿಲೋಮಿನಾ ಕಾಲೇಜಿನ ಐಕ್ಯೂಎಸಿಯ ಸಂಯೋಜನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ಮಂಗಳೂರು ಆಕಾಶವಾಣಿಯಲ್ಲಿ ಇಂದು ಜರಗಲಿದೆ. ಸಂಜೆ ಘಂಟೆ 5 ರಿಂದ ಕೊಂಕಣಿ ಕಾರ್ಯಕ್ರಮದಲ್ಲಿ ಕೊಂಕಣಿ ಸಂಸ್ಕøತಿಯ ಹಿರಿಮೆಯನ್ನು ಬಿಂಬಿಸುವ ಕಥೆ, ಕವನ, ಹಾಡು ಮತ್ತು ಖ್ಯಾತ ಕ್ರೀಡೆಗಳ ಕುರಿತು ಮಾಹಿತಿ ಬಿತ್ತರಗೊಳ್ಳಲಿದೆ. ರಾತ್ರಿ ಘಂಟೆ 8 ರಿಂದ ಕನ್ನಡ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ಭಾಗವತಿಕೆ, ಭಾವ ಗೀತೆ, ಕವನ ವಾಚನ, ಪ್ರಬಂಧ ವಾಚನ, ಭಾಷಣ ಮೊದಲಾದವುಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಕಾಲೇಜಿನ ಪಿಆರ್‍ಒ ಪ್ರಕಟನೆ ತಿಳಿಸಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು