Thursday, January 23, 2025
ಸುದ್ದಿ

ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆದ ಬ್ರೈಡಲ್ ಕಾಂಪಿಟೇಷನ್;ಕಹಳೆ ನ್ಯೂಸ್

ಅರೇ! ಮೇಕಪ್ ಇಲ್ಲದೆ ಮದುಮಗಳು ಮದುವೆ ಮಂಟಪಕ್ಕೆ ಬರುವುದುಂಟಾ?
ಮದುವೆಗೆ ತಿಂಗಳಿರುವಾಗಲೇ ಫೇಶಿಯಲ್, ಮಸಾಜ್ ಅಂತ
ಸೌದರ್ಯವರ್ಧನೆಯಲ್ಲಿ ತೊಡಗುತ್ತಾರೆ. ಮದುವೆಗೆ ಯಾವ ರೀತಿ ಮೇಕಪ್ ಮಾಡಬೇಕು,ಹೇಗೆ ಮಾಡಿದರೆ ಸೌಂದರ್ಯವತಿಯಾಗಿ ಮಿಂಚಬಹುದು,ಯಾವ ಪಾರ್ಲರ್ ಸೂಕ್ತ ಎಂದೆಲ್ಲಾ ತಲೆ ಕೆಡಿಸಿಕೊಳ್ಳುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದಕ್ಕಾಗಿಯೇ ಪುತ್ತೂರಿನ ಪ್ರತಿಷ್ಠಿತ ವಸ್ತø ಮಳಿಗೆ ನ್ಯೂ ಆರ್.ಎಚ್.ಸೆಂಟರ್ ಮತ್ತು ವುಮೆನ್ಸ್ ವಲ್ರ್ಡ್ ಪ್ರಸುತ್ತ ಪಡಿಸಿದ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ ಪ್ರಾಯೋಜಕತ್ವದಲ್ಲಿ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಬ್ರೈಡಲ್ ಕಾಂಪಿಟೇಷನ್ ಮದುಮಗಳ ಮೇಕಪ್ ಮತ್ತು ಡ್ರೆಸ್ ಸ್ಪರ್ಧೇ ಏರ್ಪಡಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಕಡೆಗಳಿಂದ 18 ಯುವತಿಯರು ನಾನಾ ವಸ್ತø ವಿನ್ಯಾಸ,ಸಂಸ್ಕøತಿಯನ್ನ ಪ್ರತಿನಿಧಿಸುವ ಮದುವಣಗಿತ್ತಿಯ ಉಡುಗೆಯಲ್ಲಿ ಭಾಗವಹಿಸಿದ್ದರು.

ಆರ್.ಎಚ್ ಸೆಂಟರ್‍ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಭಾ ಫ್ಯಾಷನ್ ಹಾಗೂ ಐಶ್ವರ್ಯ ಹರ್ಬಲ್ ಬ್ಯೂಟಿ ಪಾರ್ಲರ್ ಪ್ರಾಯೋಜಕರಾಗಿದ್ದರು.

 

ವಿಜೇತರಿಗೆ ಪ್ರಥಮ ಬಹುಮಾನವಾಗಿ 5,555 ನಗದು ಹಾಗೂ ಟ್ರೋಫಿ,ದ್ವಿತೀಯ 3,333 ನಗದು ಹಾಗೂ ಟ್ರೋಫಿ ,ತ್ರತೀಯ 1,111 ನಗದು ಹಾಗೂ ಟ್ರೋಫಿ ನೀಡಲಾಯಿತು.ಸಾಮಾಧನಕರ ಬಹುಮಾನದೊಂದಿಗೆ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಸರ್ಟಿಫಿಕೇಟ್ ನೀಡಲಾಯಿತು.


ಪ್ರಥಮ ಬಹುಮಾನವನ್ನು ಸ್ವಾನೀ ಶೆಟ್ಟಿ , ದ್ವೀತಿಯ ಬಹುಮಾನವನ್ನು ಧನುಶ್ರೀ ಪುಣಚ, ತೃತೀಯ ಬಹುಮಾನವನ್ನು ಶ್ರಾವ್ಯ ಜೆ.ಶೆಟ್ಟಿ ಪಡೆದುಕೊಂಡರು.ವುಮೆನ್ಸ್ ವಲ್ರ್ಡ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.