Wednesday, January 22, 2025
ಸುದ್ದಿ

ಶೈಖುನಾ ಅಬ್ದುಲ್ಲ ಅಹ್ಸನಿ ಉಸ್ತಾದರ ಶಿಷ್ಯ ಸಂಗಮ-ಕಹಳೆ ನ್ಯೂಸ್

ಬಜ್ಪೆ : ಶೈಖುನಾ ಅಬ್ದುಲ್ಲ ಅಹ್ಸನಿ ಉಸ್ತಾದರ ಶಿಷ್ಯ ಸಂಗಮವು ಇಲ್ಲಿನ ಬಜ್ಪೆ ಕೇಂದ್ರ ಮಸೀದಿಯಲ್ಲಿ ನಡೆಯಿತು. ಧಾರ್ಮಿಕ ಜ್ಞಾನ ಧಾರೆಯೆರೆದು ಕೊಡುವಲ್ಲಿ 2 ದಶಕಗಳನ್ನು ಪೂರ್ತೀಕರಿಸಿದ ಶೈಖುನಾ ಪುಂಜಾಲಕಟ್ಟೆ ಅಬ್ದುಲ್ಲ ಅಹ್ಸನಿ ಉಸ್ತಾದರಿಗೆ ಸನ್ಮಾನ ಮಾಡಲಾಯಿತು. ಇದೇ ಸಂದರ್ಭ ನೂತನವಾಗಿ ಶಿಷ್ಯ ಸಂಘಟನೆಗೆ ಚಾಲನೆ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷರಾಗಿ ಮುನೀರ್ ಕಾಮಿಲ್ ಸಖಾಫಿ ಉಳ್ಳಾಲ, ಉಪಾಧ್ಯಕ್ಷರಾಗಿ ಹನೀಫ್ ಕೊಡಗು, ಮುಸ್ತಫಾ ಹಿಮಮಿ ಗೇರುಕಟ್ಟೆ, ಮುಸ್ತಫಾ ಸಅದಿ ಕಡಬ, ಪ್ರ.ಕಾರ್ಯದರ್ಶಿಯಾಗಿ ಯಾಕುಬ್ ಮದನಿ ನೂಜಿ, ಜೊತೆ ಕಾರ್ಯದರ್ಶಿಗಳಾಗಿ ನೌಷಾದ್ ಸಖಾಫಿ ತಲಕ್ಕಿ, ಇಲ್ಯಾಸ್ ತಲಕ್ಕಿ, ಮಹ್ ರೂಫ್ ಆತೂರು, ಕೋಶಾಧಿಕಾರಿಯಾಗಿ ಹನೀಫ್ ಸಅದಿ ಕುಂತೂರು ಅವರನ್ನು ನೇಮಿಸಲಾಯಿತು. ಕಾರ್ಯಕ್ರಮದಲ್ಲಿ ಎಂ.ಜೆ.ಎಂ ಬಜ್ಪೆ ಅಧ್ಯಕ್ಷರಾಗಿರುವ ಇಸ್ಮಾಯಿಲ್ ಹಾಜಿ ಜಾವಳೆ ಸಹಿತ ವಿವಿಧ ಅತಿಥಿಗಳು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಇಲ್ಯಾಸ್ ತಲಕ್ಕಿ ಸ್ವಾಗತಿಸಿ, ಸಂಶುದ್ದೀನ್ ತೀರ್ಥಹಳ್ಳಿ ವಂದಿಸಿದರು.