Thursday, November 28, 2024
ಸುದ್ದಿ

ಸಮಾಜಮುಖಿ ಚಿಂತನೆಯ ದಿವ್ಯಪ್ರಭಾ ಚಿಲ್ತಡ್ಕ ನೇತೃತ್ವದ ಪ್ರಿಯದರ್ಶಿನಿ ಮಹಿಳಾ ಸಹಕಾರಿ ಸಂಘ ಅಸ್ತಿತ್ವಕ್ಕೆ – ಕಹಳೆ ನ್ಯೂಸ್

 

ಪುತ್ತೂರು : ಪುತ್ತೂರು – ಸುಳ್ಯ ತಾಲೂಕು ವ್ಯಾಪ್ತಿ ಹೊಂದಿರುವ ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘ ಪುತ್ತೂರಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ.ಮಹಿಳಾ ಸಬಲೀಕರಣ ದೃಷ್ಟಿಯಿಂದ  ಆರಂಭವಾಗಿರುವ ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಉಧ್ಘಾಟನೆಯೂ ಅತ್ಯಂತ ವೈಭವೋಪೇತವಾಗಿ   ಇಂದು (ಜ. 28ರಂದು ) ಇಲ್ಲಿನ ದರ್ಬೆ ಶ್ರೀರಾಮ ಸೌಧದ ಎರಡನೇ ಮಹಡಿಯಲ್ಲಿ  ನಡೆಯಿತ್ತು.  ಇದು  ಸಹಕಾರಿ ಸಂಘಗಳ ಕಾಯಿದೆ ಪ್ರಕಾರ  ಅಸ್ತಿತ್ವಕ್ಕೆ ಬಂದಿದ್ದು ,ಇಲ್ಲಿ ಖಾತೆ ತೆರೆದ ಪ್ರತಿ  ಸದಸ್ಯೆಯರಿಗೆ ಸರಕಾರವೇ ತಲಾ ಐನೂರು ರೂ. ಶೇರು ನೀಡಲಿದೆ. ಇದು ಮಹಿಳೆಯರ ಸಹಕಾರಿ ಸಂಘಕ್ಕೆ ಸರಕಾರ ನೀಡಿರುವ ವಿಶೇಷ ಸವಲತ್ತಾಗಿದೆ. ಸಂಘದ ಉದ್ಘಾಟನೆಯೂ ಪುತ್ತೂರಿನ ಒಕ್ಕಲಿಗ ಗೌಡ ಸಂಘದಲ್ಲಿ ನೆರೆವೇರಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭಾ ಕಾರ್ಯಕ್ರಮಕ್ಕೆ ಮೊದಲು ಸಚಿವ ಬಿ. ರಮಾನಾಥ ರೈ, ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಮಾೈದೆ ದೇವುಸ್ ಚರ್ಚ್‍ನ ಧರ್ಮಗುರು ವಂ| ಆಲ್ರೆಡ್ ಜೆ. ಪಿಂಟೋ ಉಪಸ್ಥಿತಿಯಲ್ಲಿ ಸಂಘದ ಕಚೇರಿ, ಆಡಳಿತ ಕಚೇರಿ ಮತ್ತು ಭದ್ರತಾ ಕೊಠಡಿ, ಗಣಕೀಕರಣ ವ್ಯವಸ್ಥೆ, ವೆಬ್‍ಸೈಟ್‍ನ್ನು ಶ್ರೀರಾಮ ಸೌಧದ ಎರಡನೇ ಮಹಡಿಯಲ್ಲಿ ಉದ್ಘಾಟಿಸಲಾಯಿತು. ಸಂಘದ ಲಾಂಛನ ಬಿಡುಗಡೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆಯರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನಷ್ಟು ಸಬಲೀಕರಣಗೊಳ್ಳಬೇಕು. ಸ್ವಾಭಿಮಾನದ ಬದುಕು ಮಹಿಳೆಯರಿಗೆ ಸಿಕ್ಕಾಗ ಸಮಾಜದ ಬೆಳವಣಿಗೆ ವೇಗವನ್ನು ಪಡೆದುಕೊಳ್ಳಲು ಸಾಧ್ಯ, ದಿವ್ಯಪ್ರಭಾ ಚಿಲ್ತಡ್ಕರ ಕಾರ್ಯ ಶ್ಲಾಗನೀಯ ಎಂದು ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಧರ್ಮದ ನೆಲೆಗಟ್ಟಿನಲ್ಲಿ ಯೋಚನೆ, ಯೋಜನೆಗಳು ಸಾಗಿದಾಗ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ. ಧರ್ಮವನ್ನು ಪುನರುತ್ಥಾನ ಮಾಡುವ ಶಕ್ತಿ ಸ್ತ್ರೀ ಸಮಾಜಕ್ಕೆ ಇದೆ. ಸಚ್ಛಾರಿತ್ರ್ಯ, ಸದ್ಭಾವನೆ ಮಹಿಳೆಯರಲ್ಲಿದ್ದಾಗ ಪುರುಷ ಸಮಾಜವನ್ನೂ ತಿದ್ದಿ ತೀಡುವ ಶಕ್ತಿ ಸಿಗುತ್ತದೆ. ಸ್ವರ್ಗ -ನರಕವನ್ನು ಸೃಷ್ಟಿಸುವ ಶಕ್ತಿ ಹೊಂದಿರುವ ಮಹಿಳೆಯರು ಸಮಾಜದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕು
ಸ್ವಾವಲಂಭನೆಯ ಜೀವನಕ್ಕೆ ತನ್ನದೇ ಆದ ಅಸ್ತಿತ್ವದ ಅಗತ್ಯವಿದೆ. ಸ್ವಾವಲಂಭನೆಗೆ ಪ್ರೇರಣೆಯಾಗುವಲ್ಲಿ ಸಹಕಾರಿ ಕ್ಷೇತ್ರ ಅಸ್ತಿತ್ವ ತೋರಿಸಿಕೊಡುತ್ತದೆ. ಮಹಿಳೆಯರು ದಿಟ್ಟತನ ಮೈಗೂಡಿಸಿಕೊಂಡು ಸಮಾಜದ ಕಣ್ಮಣಿಗಳಾಗಿ ಬೆಳೆಯಬೇಕು ಎಂದು ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಹೇಳಿದರು.
ಸಮಾಜದ ನಿರ್ಗತಿಕರು, ಅಸಕ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಮಹಿಳಾ ಸಹಕಾರಿ ಸಂಘ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಆರ್ಥಿಕವಾಗಿ , ಮಾನಸಿಕವಾಗಿಯೂ ಸ್ಥೈರ್ಯ ತುಂಬುವ ಕೆಲಸ – ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ

ಅಧ್ಯಕ್ಷತೆ ವಹಿಸಿದ ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಡಾ| ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತನಾಡಿ, ಮಹಿಳೆಯರಿಗೆ ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸ್ಥೈರ್ಯ ತುಂಬುವ ಕೆಲಸವನ್ನು ಸಹಕಾರ ಸಂಘ ಮಾಡಲಿದೆ. ಸಂಘ ಆರಂಭಿಸುವ ಸಂದರ್ಭದಲ್ಲಿ ಎದುರಾದ ಅನೇಕ ಅಡೆತಡೆಗಳನ್ನು ಮೀರಿ ಒಳ್ಳೆಯ ಗುರಿಯ ಕಡೆಗೆ ಸಾಗಿದ ಖುಷಿ ನಮ್ಮೆಲ್ಲರಲ್ಲಿದೆ ಎಂದರು.

ಪಾಲು ಪತ್ರ ವಿತರಣೆ
ಹಿರಿಯ ಮುಖಂಡೆ ಹಾಗೂ ಉದ್ಯಮಿ ನಳಿನಿ ಲೋಕಪ್ಪ ಗೌಡ ಪ್ರಥಮ ಪಾಲುಪತ್ರ ವಿತರಣೆ ಮಾಡಿದರು. ಪ್ರಥಮ ಠೇವಣಿ ಪತ್ರವನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಹಾಗೂ ಪ್ರಥಮ ಸಾಲ ಪತ್ರವನ್ನು ಸಂಜೀವ ಮಠಂದೂರು ವಿತರಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಾದ ಸುಧಾ ಬರಗೂರು, ನಳಿನಿ ಲೋಕಪ್ಪ ಗೌಡ ಹಾಗೂ ಡಾ| ಗೌರಿ ಪೈ ಹಾಗೂ ಭಾರತಿ ಶಂಕರ್ ಅವರನ್ನು ಸಮ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠ೦ದೂರು ,ರಾಜ್ಯ ಆರೆಭಾಷಾ ಅಕಾಡೆಮಿ ಸದಸ್ಯರಾದ ಮಾಧವ ಗೌಡ, ಚಿದಾನಂದ ಬೈಲಾಡಿ,  ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯ ಮಾಜಿ ನಿರ್ದೇಶಕ ನವೀನ್ ಭಂಡಾರಿ, ದ.ಕ. ಹಾ.ಉ. ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ ರೈ, ಶ್ರೀರಾಮ ಸವಧ ಕಟ್ಟಡದ ಮಾಲಕ ಉಮೇಶ್ ನಾಯಕ್, ಹಿರಿಯ ಮುಖಂಡೆ ಹಾಗೂ ಉದ್ಯಮಿ ನಳಿನಿ ಲೋಕಪ್ಪ ಗೌಡ, ವೈದ್ಯೆ ಡಾ| ಗೌರಿ ಪೈ, ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಸದಸ್ಯರಾದ ನಳಿನಾಕ್ಷಿ, ಜಾನಕಿ ಎಂ., ಗುಲಾಬಿ, ವನಜ, ಶ್ವೇತಾ ಶೆಟ್ಟಿ, ಫಿಲೋಮಿನಾ ಲೋಬೊ, ರೂಪಾ ಬೈಲಾಡಿ, ಕುಸುಮಾ, ಸುಮತಿ, ತೇಜಾವತಿ, ಜಯಶ್ರೀ ಆಚಾರ್ಯ, ಜೊಹರಾ, ಮ್ಯಾನೇಜರ್ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಸದಸ್ಯೆ ಉಷಾ ಅಂಚನ್ ಸ್ವಾಗತಿಸಿ, ಹರಿಣಾಕ್ಷಿ ಜೆ. ಶೆಟ್ಟಿ ಹಾಗೂ ಜೊಹರಾ ನಿಸಾರ್ ಕಾರ್ಯಕ್ರಮ ನಿರ್ವಹಿಸಿದರು.

ಅನಂತರ ಸುಳ್ಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಕ್ಕ ಉಮಾದೇವಿ ಅವರಿಂದ ಪ್ರವಚನ ಹಾಗೂ ಸುಧಾ ಬರಗೂರು ತಂಡದಿಂದ ನಗೆಹಬ್ಬ ವಿನೂತನ ಹಾಸ್ಯ ಕಾರ್ಯಕ್ರಮ ನಡೆಯಿತು.

ವರದಿ ಸಂಗ್ರಹ : ಕಹಳೆ ನ್ಯೂಸ್

Leave a Response