Monday, January 20, 2025
ರಾಜಕೀಯಸುದ್ದಿ

ಮಂಜೇಶ್ವರ: ನಕಲಿ ಮತದಾನ ಯತ್ನ – ಯುವತಿ ವಶಕ್ಕೆ-ಕಹಳೆ ನ್ಯೂಸ್

ಮಂಜೇಶ್ವರ ಉಪಚುನಾವಣೆಯ ಸಂದರ್ಭದಲ್ಲಿ ನಕಲಿ ಮತದಾನ ಮಾಡಲು ಯತ್ನಿಸಿದ ಯುವತಿಯನ್ನು ಮಂಜೇಶ್ವರ ಪೊಲೀಸರು ವಶಕ್ಕೆ ಪಡೆದ ಘಟನೆ ಅ. 21 ರ ಸೋಮವಾರ ನಡೆದಿದೆ.


ಬಾಕ್ರಬೈಲ್ ನಬೀಸಾ ನಕಲಿ ಮತದಾನಕ್ಕೆ ಪ್ರಯತ್ನಿಸಿದ ಯುವತಿ. ಈಕೆ ಮುಸ್ಲಿಂ ಲೀಗ್ ಕಾರ್ಯಕರ್ತೆ ಎಂದು ಅಂದಾಜಿಸಲಾಗಿದೆ. ಈಕೆಯ ಬಂಧನದ ಬಗ್ಗೆ ಚುನಾವಣಾ ಅಧಿಕಾರಿಗಳು ಅಧಿಕೃತವಾಗಿ ಖಚಿತಪಡಿಸಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಕ್ರಬೈಲ್ 42 ನೇ ಬೂತ್ ನಲ್ಲಿ ಈ ಘಟನೆ ನಡೆದಿದೆ. ಮಂಜೇಶ್ವರ ಕ್ಷೇತ್ರದಲ್ಲಿ ನಬೀಸಾಗೆ ಮತದಾನವಿಲ್ಲ ಮಾತ್ರವಲ್ಲದೆ ವೋಟರ್ ಲಿಸ್ಟ್ ನಲ್ಲಿ ಈಕೆಯ ಹೆಸರಿಲ್ಲ. ಆದರೂ ಮತದಾನಕ್ಕೆ ಪ್ರಯತ್ನಿಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ವಶಕ್ಕೆ ತೆಗೆದುಕೊಂಡು ಪೊಲೀಸರಿಗೊಪ್ಪಿಸಿದರು. ಇವರ ಮೇಲೆ ಅಕ್ರಮವಾಗಿ ಮತದಾನ ಯತ್ನಿಸಿರುವ ಆರೋಪದ ಮೇಲೆ ಕೇಸು ದಾಖಲಿಸಲಾಗಿದೆ.