ದೀಪಾವಳಿ ಹಬ್ಬದ ಸಮಯದಲ್ಲಿ ಮನೆಯಲ್ಲಿ ಗೂಡುದೀಪ ಇದ್ದರೆ ಹಬ್ಬದ ವಾತಾವರಣಕ್ಕೆ ಇನ್ನಷ್ಟು ಮೆರಗು ಬರುತ್ತದೆ. ಹೆಚ್ಚಿನ ಮನೆಗಳಲ್ಲಿ ದೀಪಾವಳಿಗೆ ಗೂಡುದೀಪುಗಳು ಮನೆಗಳಿಗೆ ಅಂದವನ್ನು ಉಂಟು ಮಾಡುವುದು ಮಾತ್ರವಲ್ಲ, ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರವನ್ನು ಮಾಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ಗೂಡುದೀಪಗಳು ಸ್ವದೇಶಿ ಗೂಡುದೀಪಗಳಿಗೆ ಸ್ಪರ್ಧೆ ನೀಡುತ್ತಿದ್ದು ಸ್ಥಳೀಯ ಗೂಡುದೀಪಗಳ ತಯಾರಕರು ಆರ್ಥಿಕವಾಗಿ ಹೊಡೆತ ಅನುಭವಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಸ್ವದೇಶಿ ಗೂಡುದೀಪ ತಯಾರಿಕೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಮಂಗಳೂರಿನ ವಿಟಿ ರಸ್ತೆಯಲ್ಲಿರುವ ವಿವೇಕ್ ಟ್ರೇಡರ್ಸ್‍ನಲ್ಲಿ ಸ್ವದೇಶಿ ನಿರ್ಮಿತ ಗೂಡುದೀಪಗಳು ಸಿಗುತ್ತಿವೆ. ಈ ಗೂಡುದೀಪಗಳ ವಿಶೇಷವೆಂದರೆ ಯಾವುದೋ ಕೆಟ್ಟ ಘಳಿಗೆಯಲ್ಲಿ ತಪ್ಪು ಮಾಡಿ ಸದ್ಯ ವಿಶೇಷ ಮನೆಯಲ್ಲಿರುವ ಬಾಲಾಪರಾಧಿಗಳು ಗೂಡುದೀಪ ತಯಾರಿಸುವ ಕಾಯಕದಲ್ಲಿ ತೊಡಗಿದ್ದು, ಅವರ ಈ ಯೋಗ್ಯ ಕಾರ್ಯಕ್ಕೆ ಪ್ರೋತ್ಸಾಹ ನೀಡುವ ಅವಶ್ಯಕತೆ ಕೂಡ ನಮ್ಮೆಲ್ಲರ ಮೇಲಿದೆ.
ಉತ್ತಮ ಗುಣಮಟ್ಟದ ಗೂಡುದೀಪುಗಳು ನಿರ್ಮಾಣವಾಗಿದ್ದು, ಅದರಲ್ಲಿ ಸೂರತ್ ಮತ್ತು ಹೈದ್ರಾಬಾದಿನಿಂದ ತರಿಸಲಾದ ಬಣ್ಣಬಣ್ಣದ ಬಟ್ಟೆಗಳನ್ನು ಬಳಸಲಾಗಿದೆ. 300 ರೂಪಾಯಿ ಬೆಲೆಯ ಈ ಗೂಡುದೀಪಗಳು ಕನಿಷ್ಟ ನಾಲ್ಕು ವರ್ಷ ಬಾಳಿಕೆ ಬರಲಿದ್ದು ಈ ದೀಪಾವಳಿ ನಮ್ಮ ಮನೆಮನಗಳಲ್ಲಿ ಹರುಷ ತರಲಿ ಎನ್ನುವ ಹಾರೈಕೆ ನಮ್ಮದು.