Tuesday, January 21, 2025
ಸುದ್ದಿ

ಮಂಗಳೂರು, ಡಿ ಸಿ ಆಫಿನ್ ಶ್ರೀ ಮಾಣಿಕ್ಯ, ತಹಸೀಲ್ದಾರ್, ಇವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ-ಕಹಳೆ ನ್ಯೂಸ್

ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಕರ್ನಾಟಕ ಹಸು ವಧೆ ಮತ್ತು ಸಂರಕ್ಷಣೆ ತಡೆಗಟ್ಟುವಿಕೆ ಮಸೂದೆ, 2010 ಕಾನೂನು ಜಾರಿಗೊಳಿಸಿತ್ತು. 2014ರಲ್ಲಿ ಕಾಂಗ್ರೆಸ್ ಆಡಳಿತ ಸರಕಾರ ಅಧಿಕಾರಕ್ಕೆ ಬಂದ ಬಳಿಕ ತಕ್ಷಣವೇ ಆ ಕಾನೂನನ್ನು ರದ್ದುಗೊಳಿಸಿತ್ತು. 

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಪುನಃ ಸುದೈವದಿಂದ ಭಾರತೀಯ ಜನತಾಪಕ್ಷವು ಅಧಿಕಾರದಲ್ಲಿದೆ. ಆದುದರಿಂದ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪರವರು ರಾಜ್ಯದಲ್ಲಿ ಪುನಃ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಬೇಕು ಮತ್ತು ಗೋಮಾಂಸ ಮಾರಾಟ ಮತ್ತು ಸಾಗಾಣಿಕೆಯ ಮೇಲೆ ಕಠಿಣ ನಿರ್ಬಂಧವನ್ನು ವಿಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರ ಮೊಗೇರ ಇವರು ಮನವಿ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೋವುಗಳ ಕಳ್ಳ ಸಾಗಾಣಿಕೆ ಮಾಡುವವರನ್ನು ತಡೆಯುವ ಹಿಂದೂ ಕಾರ್ಯಕರ್ತರಿಗೆ ರಕ್ಷಣೆಯನ್ನು ಒದಗಿಸಬೇಕು, ಹಿಂದೂ ಕಾರ್ಯಕರ್ತರ ಮೇಲಾಗಿರುವ ಆಕ್ರಮಣಗಳಿಗೆ ಸಂಬಂಧಿಸಿದ ಗೋವುಗಳ ಕಳ್ಳಸಾಗಾಣಿಕೆದಾರರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಮುಂತಾದ ಬೇಡಿಕೆಗಳನ್ನು ಮಾಡಲಾಯಿತು.

ಅಶ್ಲೀಲತೆ ಮತ್ತು ಲವ್ ಜಿಹಾದ್ ಪ್ರೋತ್ಸಾಹಿಸುವ `ಬಿಗ್ ಬಾಸ್ -13’ ಈ ರಿಯಾಲಿಟಿ ಶೋ ನಿಷೇಧಿಸಿರಿ!
ಸದ್ಯ `ಕಲರ್ಸ ಟಿವಿ’ ಮಾಧ್ಯಮದಲ್ಲಿ ಪ್ರಾರಂಭವಾಗಿರುವ `ಬಿಗ್ ಬಾಸ್-13’ ಈ ರಿಯಾಲಿಟಿ ಶೋದಲ್ಲಿ `ಬೆಡ್ ಫ್ರೆಂಡ್ಸ ಫಾರೆವರ್’ ಹೆಸರಿನಡಿಯಲ್ಲಿ ಮಹಿಳಾ ಮತ್ತು ಪುರುಷ ಸ್ಪರ್ಧಿಗಳನ್ನು ಜೊತೆ ಮಾಡಿ ಅವರನ್ನು ಒಂದೇ ಮಂಚದ ಮೇಲೆ ಒಂದೆಡೆ ಮಲಗುವಂತೆ ಮಾಡುವುದು, ಈ ಮೂಲಕ ಸಾಮಿಪ್ಯತೆ ಸಾಧಿಸುವುದು, ಹಣ್ಣು, ತರಕಾರಿಗಳನ್ನು ಬಾಯಿಯಿಂದ ಎತ್ತುವ ಷರತ್ತು ವಿಧಿಸಿ, ಮಹಿಳೆ ಮತ್ತು ಪುರುಷ ಸ್ಪರ್ಧಿಗಳನ್ನು ಶಾರೀರಿಕವಾಗಿ ಸಾಮಿಪ್ಯತೆಯನ್ನು ಸಾಧಿಸುವಂತೆ ಮಾಡುವುದು, ಚುಂಬನ ದೃಶ್ಯಗಳನ್ನು ತೋರಿಸುವುದು ಇತ್ಯಾದಿಗಳನ್ನು ಕುಟುಂಬದವರೊಂದಿಗೆ ನೋಡಲು ಸಾಧ್ಯವಿಲ್ಲದ ಅಶ್ಲೀಲ ಮತ್ತು ನಾಚಿಕೆಯಾಗುವಂತಹ ದೃಶ್ಯಗಳನ್ನು ತೋರಿಸಲಾಗುತ್ತಿದೆ.

ಅಲ್ಲದೇ ಒಬ್ಬ ಕಾಶ್ಮೀರಿ ಮುಸಲ್ಮಾನ ಯುವಕನೊಂದಿಗೆ ಒಬ್ಬ ಹಿಂದೂ ಬ್ರಾಹ್ಮಣ ಯುವತಿ ಮಲಗುವುದನ್ನು ತೋರಿಸಿ` ಲವ್ ಜಿಹಾದ್’ ಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಭಾರತೀಯ ಪರಂಪರೆಯು `ಯತ್ರ ನಾರ್ಯಸ್ತು ಪೂಜಂತೆ, ರಮಂತೆ ತತ್ರ ದೇವತಾ!’ ಈ ವಚನದಂತೆ ಮಹಿಳೆಯನ್ನು ಗೌರವಿಸಲು ಕಲಿಸುತ್ತದೆ.

ಆದರೆ ಮಹಿಳೆಯರನ್ನು ಉಪಭೋಗದ ವಸ್ತುವಿನಂತೆ ತೋರಿಸಿ ಅಶ್ಲೀಲತೆಯನ್ನು ಹರಡುವ ಮತ್ತು ಲವ್ ಜಿಹಾದ್ ಪ್ರೋತ್ಸಾಹಿಸುವ `ಬಿಗ್ ಬಾಸ್-13’ ಈ ರಿಯಾಲಿಟಿ ಶೋ ವನ್ನು ತಕ್ಷಣವೇ ನಿಷೇಧಿಸಬೇಕು, ಅಲ್ಲದೇ ಕಾರ್ಯಕ್ರಮದ ನಿರ್ಮಾಪಕರು- ನಿರ್ದೇಶಕರ ಮೇಲೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಬೇಕು ಎಂದು ಈ ಸಮಯದಲ್ಲಿ ಮನವಿ ಮಾಡಲಾಯಿತು.

ಈ ಆಂದೋಲನದ ಸಮಯದಲ್ಲಿ ತೇಲಂಗಾಣದಲ್ಲಿ ದಸರೆಯ ನಿಮಿತ್ತ ರೇಲ್ವೆ ಫ್ಲಾಟ್ ಫಾರ್ಮ ಟಿಕೇಟುಗಳಲ್ಲಿ ಮಾಡಿರುವ ದರಹೆಚ್ಚಳವನ್ನು ತಕ್ಷಣವೇ ರದ್ದುಗೊಳಿಸಬೇಕು; ನವರಾತ್ರಿ ಉತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಶ್ರೀ ದುರ್ಗಾದೇವಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲೆಸೆದ ಮತಾಂಧರ ಮೇಲೆ ಕಠಿಣ ಕ್ರಮ ಜರುಗಿಸಬೇಕು; ತ್ರಿಪುರಾದ ಶ್ರೀ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ನಡೆಯುವ ಬಲಿ ಪದ್ಧತಿಯ ಮೇಲೆ ಹೇರಲಾಗಿರುವ ನಿಷೇಧವನ್ನು ಹಿಂಪಡೆಯಲು ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಬೇಕು; ಮೇಘಾಲಯದ `ನ್ಯಾಶನಲ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ’ ಶಿಕ್ಷಣ ಸಂಸ್ಥೆಯ ಕಟ್ಟಡದಿಂದ ತೆಗೆಯಲಾಗಿರುವ ಶ್ರೀ ಗಣೇಶ ಮೂರ್ತಿಯನ್ನು ಪುನಃ ಗೌರವದಿಂದ ಪ್ರತಿಷ್ಠಾಪಿಸಬೇಕು ಎಂದೂ ಕೂಡ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಜರಂಗದಳದ ಮುಖಂಢರಾದ ಶ್ರೀ ದಿನೇಶ ಮತ್ತು ಶ್ರೀ ರಾಮ ಸೇನೆಂiÀi ಶ್ರೀ ಲೋಕೇಶ ಕುತ್ತಾರ್ ಉಪಸ್ಥಿತರಿದ್ದರು.