ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು, ಹೈನುಗಾರಿಕೆ ಕುರಿತು ಅಧ್ಯಯನ ನಡೆಸಲು ಬಂಟ್ವಾಳ ತಾಲೂಕಿನ ಪೆರ್ವಾಜೆ ಫಾಮ್ರ್ಸ್‍ಗೆ ಅಕ್ಟೋಬರ್ 21 ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪೆರ್ವಾಜೆ ಫಾಮ್ರ್ಸ್ ಇದರ ಮಾಲಿಕರಾದ ಈಶ್ವರ ಭಟ್ ಇವರು ತಮ್ಮ ಘಟಕದಲ್ಲಿ ಇರುವ ವಿವಿಧ ತಳಿಗಳು, ಹಸುಗಳ ಆರೈಕೆ, ಹಸಿರು ಹುಲ್ಲಿನ ತೋಟ, ಪಶು ಆಹಾರ, ಗರ್ಭಧಾರಣೆ, ಹಾಲು ಉತ್ಪಾದನೆ, ಹಾಲಿನ ಮಾರುಕಟ್ಟೆ, ಗೊಬ್ಬರ ತಯಾರಿ, ಗೋಬರ್ ಗ್ಯಾಸ್, ಕೆಎಮ್‍ಎಫ್‍ನಿಂದ ಸಿಗವ ಸೌಲಭ್ಯ ಮೊದಲಾದವುಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಅವರು ನಿರ್ವಹಣೆ ಮಾಡುತ್ತಿರುವ ಆಡು ಸಾಕಣೆ ಘಟಕದ ಕುರಿತು ವಿದ್ಯಾರ್ಥಿಗಳಿಗೆ ಸವಿವರವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಭಾಗ ಸಂಯೋಜಕ ದಿನಕರ ರಾವ್, ಸಹಾಯಕ ಪ್ರಾಧ್ಯಾಪಕರಾದ ಸಂಧ್ಯಾ ಎಚ್, ಪ್ರದೀಪ್ ಕೆ ಎಸ್, ಬಿ ಟಿ ಸೌಮ್ಯ ಹಾಗೂ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.