Wednesday, January 22, 2025
ರಾಜಕೀಯ

ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ – ಹೆಚ್.ಡಿ ದೇವೇಗೌಡ

ರಾಜ್ಯ ಸರ್ಕಾರ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಹೇಳಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು, ಜೆಡಿಎಸ್‌ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ, ಹಿಂಸೆ ನೀಡಿದ್ದಾರೆಂದು ಆರೋಪಿಸಿ ನಗರ ಪೊಲೀಸ್ ಠಾಣೆ ಎದುರು ಉಪವಾಸ ನಿರಶನ ಆರಂಭಿಸಿರುವ ಜೆಡಿಎಸ್‌ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ಗಾಂಧಿವೃತ್ತ ಸುತ್ತಮುತ್ತ ಪೊಲೀಸ್ ನಿಷೇಧಾಜ್ಞೆ ಹೊರಡಿಸಿದ್ದು ಈ ಕಾನೂನನ್ನು ಪಾಲಿಸುತ್ತೇವೆ. ಆದರೆ ಪೊಲೀಸರು ನಿಷೇಧ ಜಾರಿಗೊಳಿಸುವ ಮೂಲಕ ಹೋರಾಟಗಾರರ ಆತ್ಮಸ್ಥೈರ್ಯವನ್ನು ಪೊಲೀಸ್ ಇಲಾಖೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲ ದಿನಗಳಿಂದ ರಾಜ್ಯ ಸರ್ಕಾರವು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ ಮಾಡುತ್ತಿದೆ. ಶರಣಗೌಡ ಕಂದಕೂರ ಹೋರಾಟವನ್ನು ಬೆಂಬಲಿಸುತ್ತೇನೆ ಮತ್ತು ಅವರ ಉಪವಾಸ ಸತ್ಯಾಗ್ರಹ‌ ಕೈಬಿಡಲು ವಿನಂತಿಸಿಕೊಳ್ಳುತ್ತೇನೆ.

ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯಲಿರುವ ಬಹಿರಂಗ ಸಭೆಗೆ ಕಂದಕೂರನ್ನು ಕರೆದೊಯ್ಯಲಿದ್ದೇನೆ ಎಂದು ತಿಳಿಸಿದರು.