Wednesday, January 22, 2025
ಸುದ್ದಿ

ಉಚಿತ ಪ್ರಕೃತಿ ಚಿಕಿತ್ಸಾ ಕಾರ್ಯಾಗಾರ-ಕಹಳೆ ನ್ಯೂಸ್

ನೆಲ್ಯಾಡಿ : ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಉಜಿರೆ ಮತ್ತು ಜ್ಞಾನೋದಯ ಬೆಥನಿ ಸಮಾಜ ಕ್ಲಬ್‍ನ ವತಿಯಿಂದ ಆಯೋಜಿಸಲ್ಪಟ್ಟ ಉಚಿತ ಪ್ರಕೃತಿ ಚಿಕಿತ್ಸಾ ಕಾರ್ಯಾಗಾರ ಜ್ಞಾನೋದಯ ಬೆಥನಿ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ± ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ. ಅವರ ಅಧ್ಯಕ್ಷತೆಯಲ್ಲಿ ಜರುಗಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ನೆಲ್ಯಾಡಿ ಪಂಚಾಯತ್‍ನ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಸಭೆಯನ್ನುದ್ದೇಶಿಸಿ ಎಲ್ಲಾ ಸಂಪತ್ತಿಗಿಂತ ಆರೋಗ್ಯವೇ ದೊಡ್ಡ ಸಂಪತ್ತು . ಆರೋಗ್ಯವೇ ಭಾಗ್ಯ. ನಂಬಿಕೆ, ಮುಖದಲ್ಲಿ ಮಂದಹಾಸ, ಆತ್ಮ ವಿಶ್ವಾಸದಿಂದ ನಾವು ಇದ್ದರೆ ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ ಇರುತ್ತದೆ ಎಂದು ಹೇಳಿ ಎಲ್ಲರೂ ಈ ಸಂದರ್ಭವನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷೀಯ ಸ್ಥಾನದಿಂದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ. ಹಿಂದಿನ ಕಾಲದಲ್ಲ ತಾಯಿಯ ಹೊಟ್ಟೆಯೇ ಮಗುವಿಗೆ ಸುರಕ್ಷಿತವಾಗಿರುತ್ತದೆ. ನಮಗೆ ಬರುವ ಎಲ್ಲಾ ಕಾಯಿಲೆಗಳಿಗೆ ಪ್ರಕೃತಿಯೇ ್ಲ ಔಷದಿಯನ್ನು ನೀಡುತ್ತದೆ. ನಾವು ಮರಳಿ ಪ್ರಕೃತಿಗೆ ಶರಣಾಗಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅತಿಥಿಯಾದ ಡಾ| ಸುಜಾತ ಚಂದ್ರಶೇಖರ್ ಮಾತನಾಡುತ್ತಾ ನಮ್ಮ ಎಲ್ಲಾ ಕಾಯಿಲೆಗಳಿಗೆ ಪ್ರಕೃತಿಯಲ್ಲಿ ಔಷಧಿ ಇದೆ. ಹವಮಾನಕ್ಕನುಗುಣವಾದ ಆಹಾರ, ವಿಹಾರ, ವಿಚಾರ, ವ್ಯಾಯಾಮವು ನಿಯಮಿತವಾಗಿದ್ದರೆ ಕಾಯಿಲೆಗಳು ನಮ್ಮನ್ನು ಸುಳಿಯಲಾರದು ಎಂದು ಹೇಳಿ ಶುಭ ಹಾರೈಸಿದರು.

ರೆ|ಫಾ| ಜಿತಿನ್ ಜೇಕಬ್ ಒಐಸಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ಪ್ರಸ್ತುತ ಪಡಿಸುತ್ತಾ ಪ್ರಾತ್ಯಾಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಸುಮಾರು ನೂರಕ್ಕೂ ಹೆಚ್ಚು ಮಂದಿ ಉಚಿತ ತಪಾಸಣೆ ಗೈದರು. ಈ ಸಂದರ್ಭದಲ್ಲಿ ರೆ|ಫಾ ಐಸಕ್ ಸಾಮ್ ಒಐಸಿ, ಡಾ| ಜಿತಿನ್ ಜೆಕಬ್, ಡಾ| ಫಾತಿಮಾ, ಡಾ| ಅಂಜಲಿ ರಾಜಶೇಖರ್, ಡಾ| ಅಭಯ್ ಸಿಂಗ್, ಡಾ| ಹಿತಾ, ಡಾ| ಲಲಿತಾ, ಡಾ| ಬಾಲಮ್ಮ ಉಪನ್ಯಾಸಕ ವರ್ಗ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ನಿಸ್ಸಿ ಮತ್ತು ತಂಡ ಪ್ರಾರ್ಥಿಸಿದರು.

ಕುಮಾರಿ ಸ್ವಪ್ನ ಸ್ವಾಗತಿಸಿ, ಕುಮಾರಿ ಯಾಸ್ಮಿನಾ ವಂದಿಸಿದರು. ಕುಮಾರಿ ಅನನ್ಯ ಮಧು ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಿಕೆಯಾರಾದ ಶ್ರೀಮತಿ ಶೋಭಾ ಮತ್ತು ಶ್ರೀಮತಿ ನಯನ ಕಾರ್ಯಕ್ರಮ ಅಯೋಜಿಸಿದರು.